ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಚಾರಿಟಿಗೆ ಸುಮನ್ ನಗರ್‌ಕರ್‌ 400 ಕಿ.ಮೀ. ಓಟ

Last Updated 10 ಜುಲೈ 2020, 11:43 IST
ಅಕ್ಷರ ಗಾತ್ರ

ಕೊರೊನಾ ಮಹಾಮಾರಿಯಿಂದಾಗಿ ವಿಶ್ವವೇ ತಲ್ಲಣಿಸಿದೆ. ಅನೇಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ರೀತಿ ತೊಂದರೆಗೊಳಗಾದವರ ನೆರವಿಗೆ ಸಮಾಜ ಸೇವೆಯ ಕೆಲಸಗಳೂ ಸಹ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಸ್ಯಾಂಡಲ್‌ವುಡ್ ತಾರೆಯರೂ ಸಹ ತೊಂದರೆಗೊಳಗಾದವರಿಗೆ ಸಹಾಯ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು ರನ್ನರ್ಸ್ ಆಯೋಜಿಸಿರುವ #Run2020-Move2feed fund raise ಅಭಿಯಾನದಲ್ಲಿ ಸುಮನ್ ನಗರ್‌ಕರ್ ಕೂಡ ತಮ್ಮ ಪತಿ ಗುರು ಜೊತೆ ಭಾಗಿಯಾಗಿದ್ದಾರೆ.

ಜುಲೈ 1ರಿಂದ ಆರಂಭವಾಗಿ 20ರವರೆಗೆ ನಡೆಯುತ್ತಿರುವ ಈ ಓಟದಲ್ಲಿ ಇಪ್ಪತ್ತು ದಿನಗಳ ಕಾಲ ಇಪ್ಪತ್ತು ಓಟಗಾರರು ಪ್ರತಿ ದಿನ ಇಪ್ಪತ್ತು ಕಿಲೋಮೀಟರ್ ಓಡಿ ನಿಧಿ ಸಂಗ್ರಹಿಸಲಿದ್ದಾರೆ. ಹಾಗೆ ಸಂಗ್ರಹಿಸಿದ ಹಣವನ್ನು ಬಡವರಿಗೆ, ದಿನಗೂಲಿಯವರಿಗೆ, ಕಷ್ಟದಲ್ಲಿರುವವರಿಗೆ ಸಾಯಿ ವಿಶ್ವನಾಥ್ ಮೆಮೋರಿಯಲ್ ಟ್ರಸ್ಟ್‌ ಮೂಲಕ ದಿನಸಿಗಳನ್ನು ಸರಬರಾಜು ಮಾಡಲಿದ್ದಾರೆ. ಈ ಕಾರ್ಯಕ್ಕೆ ಸಹಾಯ ಮಾಡಬಯಸುವವರು ಫೇಸ್‌ಬುಕ್‌ನ Move2feed ಅಥವಾ ಸುಮನ್ ನಗರ್‌ಕರ್ ಅವರ ಫೇಸ್‌ಬುಕ್‌ ಪೇಜ್‌ನಲ್ಲೂ ಮಾಹಿತಿ ಪಡೆಯುವ ಅವಕಾಶವಿದೆ.

ಕೆಲ ವರ್ಷಗಳ ಬಿಡುವಿನ ನಂತರ ನಟನೆಗೆ ಮರಳಿರುವ ಸುಮನ್, ತಮ್ಮದೇ ನಿರ್ಮಾಣ ಸಂಸ್ಥೆಯಿಂದ ‘ಬಬ್ರೂ’ ಹಾಗೂ ‘ಬ್ರಾಹ್ಮಿ’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಹಾಗೆಯೇಲಾಕ್‌ಡೌನ್‌ ಸಂದರ್ಭ ಬೆಂಗಾಲಿ ನಿರ್ದೇಶಕ ಸಂಚಯನ್ ಚಕ್ರವರ್ತಿಯವರ ‘ಲಾಕ್ಡೌನ್ ಡೈರೀಸ್’ ಹಿಂದಿ ಕಿರುಚಿತ್ರ ಹಾಗೂ ಸಿಂಗಪುರದಲ್ಲಿರುವ ಪ್ರಶಸ್ತಿ ವಿಜೇತ ನಿರ್ದೇಶಕಿ ಶಿಲ್ಪ ಕ್ರಿಷ್ನನ್ ಶುಕ್ಲಾ ಅವರ ಇಂಗ್ಲಿಷ್ ಹಿಂದಿ ಮಿಶ್ರಿತ ಚಲನಚಿತ್ರ ‘ಡಾಟ್ಸ್’ನಲ್ಲಿ ಸುಮನ್‌ ನಟಿಸಿದ್ದಾರೆ.

ಸುಮನ್ ಈಗ ಹೆಚ್ಚು ಜನರಿಗೆ ಪರಿಚಿತವಾಗಿರುವುದು ಆಕೆ ಮ್ಯಾರಥಾನ್(42.2km) ರನ್ನರ್ ಎಂಬುದು. ಅಮೆರಿಕ ಹಾಗೂ ಬೆಂಗಳೂರಿನಲ್ಲಿ ನಡೆದಿರುವ ಹಲವು ಮ್ಯಾರಥಾನ್ ಓಟಗಳಲ್ಲಿ ಸುಮನ್‌ ಭಾಗವಹಿಸಿದ್ದಾರೆ. ಪ್ರತಿದಿನ ಇಪ್ಪತ್ತು ಕಿಲೋಮೀಟರ್ ಓಡುವ ಈ ಅಭಿಯಾನದ ಮೂಲಕ ನಿಧಿ ಸಂಗ್ರಹಿಸಿ ಕಷ್ಟದಲ್ಲಿರುವವರಿಗೆ ನೆರವಾಗುವ ಹಂಬಲ ಸುಮನ್‌ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT