ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಂದರಿ’ ಸಾಕ್ಷಿ ಕನ್ನಡ ಎಂಟ್ರಿ!

Last Updated 3 ಜೂನ್ 2019, 19:45 IST
ಅಕ್ಷರ ಗಾತ್ರ

ಶುಕ್ರವಾರವಷ್ಟೇ ತೆರೆಗೆ ಬಂದಿರುವ ‘ಸುವರ್ಣ ಸುಂದರಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ ತೆಲುಗು ನಟಿ ಸಾಕ್ಷಿ ಚೌಧರಿ. ಇವರು ಹುಟ್ಟಿದ್ದು ಉತ್ತರದ ಡೆಹ್ರಾಡೂನ್‌ನಲ್ಲಿಯಾದರೂ, ಸ್ಥಾನ ಪಡೆದಿದ್ದು ದಕ್ಷಿಣದ ತೆಲುಗು ಚಿತ್ರಲೋಕದಲ್ಲಿ. ಇವರ ಮೊದಲ ಚಿತ್ರ ‘ಪೋಟುಗಾಡು’.

‘ಸುವರ್ಣಿ ಸುಂದರಿ’ ಸಿನಿಮಾದ ಕಾರ್ಯ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಸಾಕ್ಷಿ ಅವರು ‘ಚೌಚೌ’ ಜೊತೆಗೆ ಮಾತಿಗೆ ಸಿಕ್ಕಿದ್ದರು. ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇದು:

‘ಸುವರ್ಣ ಸುಂದರಿ’ ನಿಮಗೆ ಕನ್ನಡ ಸಿನಿಮಾ ಲೋಕದ ಬಾಗಿಲು ತೆರೆದಿದೆ. ಏನನ್ನಿಸುತ್ತಿದೆ ಈ ಹೊತ್ತಿನಲ್ಲಿ?

ಒಂದೇ ಮಾತಿನಲ್ಲಿ ಹೇಳಬೇಕು ಎಂದಾದರೆ, ನಾನು ಉತ್ಸುಕಳಾಗಿದ್ದೇನೆ. ತೆಲುಗಿನಲ್ಲಿ ಸಿನಿಮಾ ಮಾಡಿದ್ದೇನೆ, ತಮಿಳಿನಲ್ಲೂ ಒಂದು ಸಿನಿಮಾ ಆಗುತ್ತಿದೆ. ಕನ್ನಡದ ಸಿನಿಮಾದಲ್ಲಿ ನಟಿಸಬೇಕು ಎಂದು ಬಹಳ ಸಮಯದಿಂದ ಬಯಸಿದ್ದೆ. ಆದರೆ ಸರಿಯಾದ ಅವಕಾಶ ಸಿಕ್ಕಿರಲಿಲ್ಲ. ‘ಸುವರ್ಣ ಸುಂದರಿ’ ಸಿನಿಮಾ ಮೂಲಕ ಕನ್ನಡ ಸಿನಿಲೋಕ ಪ್ರವೇಶ ಸಿಕ್ಕಿರುವುದು ಖುಷಿಯ ವಿಚಾರ.

ಸರಿಯಾದ ಅವಕಾಶ ಸಿಕ್ಕಿರಲಿಲ್ಲ ಎಂದು ಹೇಳಿದಿರಿ. ಯಾವ ರೀತಿಯ ಅವಕಾಶ ಹುಡುಕುತ್ತಿದ್ದಿರಿ? ಇದು ಸರಿಯಾದ ಅವಕಾಶ ಏಕೆ?

ಇದು ತೆಲುಗು–ಕನ್ನಡ ಸಿನಿಮಾ. ನಿರ್ದೇಶಕರು ಚಿತ್ರದ ಕಥೆಯನ್ನು ಹೇಳಿದಾಗ ನನಗೆ ಖುಷಿ ಆಯಿತು. ಹಾಗೆಯೇ, ಇದು ಕನ್ನಡದಲ್ಲಿ ಕೂಡ ತಯಾರಾಗುತ್ತದೆ ಎಂಬುದು ಗೊತ್ತಾದಾಗ ಇನ್ನಷ್ಟು ಖುಷಿ ಆಯಿತು. ನಾನು ಒಂದು ಸಿನಿಮಾ ಆಯ್ಕೆ ಮಾಡಿಕೊಂಡರೆ, ಆ ಸಿನಿಮಾ ಮೂಲಕ ನನ್ನ ಅಸ್ಮಿತೆಯನ್ನೂ ಹುಡುಕಿಕೊಳ್ಳಬೇಕಾಗುತ್ತದೆ. ಹಾಗೇ ಸುಮ್ಮನೆ ಎಂದು ಒಂದು ಸಿನಿಮಾ ಆಯ್ಕೆ ಮಾಡಿಕೊಳ್ಳುವ ಸಾಹಸ ಮಾಡಲು ನನ್ನಿಂದಾಗದು. ಮೊದಲ ಸಿನಿಮಾ ಚೆನ್ನಾಗಿಯೇ ಇರಬೇಕಲ್ಲ? ಅದು ನಮ್ಮ ವೃತ್ತಿ ಬದುಕನ್ನು ನಿರ್ಧರಿಸುತ್ತದೆ.

ಕನ್ನಡದ ಸಿನಿಮಾ ವೀಕ್ಷಕರ ಮನಸ್ಸಿನಲ್ಲಿ ಯಾವ ರೀತಿಯ ಇಮೇಜ್ ಕಟ್ಟಿಕೊಳ್ಳು ವುದು ನಿಮ್ಮ ಗುರಿ?

ಸಿನಿಮಾ ನೋಡಿದ ನಂತರ ಜನ ನನ್ನನ್ನು, ನನ್ನ ಅಭಿನಯವನ್ನು ಇಷ್ಟಪಡಬೇಕು. ಇದು ನನ್ನ ದೊಡ್ಡ ಬಯಕೆ. ‘ಈ ಹುಡುಗಿ ಚೆನ್ನಾಗಿ ಅಭಿನಯಿಸಿದ್ದಾಳೆ’ ಎಂದು ಅವರು ಹೇಳುವಂತೆ ಆಗಬೇಕು. ಈ ಆಸೆಯನ್ನು ಸುವರ್ಣ ಸುಂದರಿ ಈಡೇರಿಸುತ್ತದೆ ಎಂದು ನಂಬಿದ್ದೇನೆ.

ರಾಣಿಯ ಪಾತ್ರ ಸಿಕ್ಕಿದ್ದು ಈ ಚಿತ್ರವನ್ನು ನೀವು ಒಪ್ಪಿಕೊಳ್ಳಲು ಮುಖ್ಯ ಕಾರಣವಾಯಿತಾ?

ಖಂಡಿತ, ಅದರಲ್ಲಿ ಅನುಮಾನವೇ ಇಲ್ಲ. ಅಂಥದ್ದೊಂದು ಪಾತ್ರ ಮಾಡುವಾಗ, ರಾಣಿಗೆ ತಕ್ಕುದಾದ ವಸ್ತ್ರ ತೊಟ್ಟಾಗ ‘ನಾನೇ ರಾಣಿ’ ಎನ್ನುವ ಭಾವ ಸಿಗುತ್ತದೆ. ಅದು ಕೊಡುವ ಖುಷಿ ದೊಡ್ಡದು. ಮಾಮೂಲಿ ಪಾತ್ರಗಳನ್ನು ಯಾರಾದರೂ ಮಾಡಬಹುದು. ಆದರೆ ಭಿನ್ನ ಪಾತ್ರಗಳನ್ನು ನಿಭಾಯಿಸುವುದು ಸವಾಲು.

ಈ ಸಿನಿಮಾ ಬಿಡುಗಡೆ ನಂತರದ ಹಾದಿ, ಹೆಜ್ಜೆ ಏನು?

ಚಿತ್ರಕಥೆ ಚೆನ್ನಾಗಿದ್ದರೆ ಒಪ್ಪಿಕೊಳ್ಳುತ್ತೇನೆ. ಭಿನ್ನ ಪಾತ್ರಗಳನ್ನು ನಿಭಾಯಿಸುವುದು ನನಗೆ ಇಷ್ಟ. ತೆಲುಗಿನಲ್ಲೂ ನಾನು ನಿಭಾಯಿಸಿರುವುದು ಭಿನ್ನ ಪಾತ್ರಗಳನ್ನೇ. ಕನ್ನಡದ ‘ರುಸ್ತುಂ’ ಚಿತ್ರದಲ್ಲಿ ಒಂದು ಹಾಡಿನಲ್ಲಿ ನಟಿಸಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT