ಬುಧವಾರ, ಮಾರ್ಚ್ 22, 2023
19 °C

'ಸೂಪರ್ ಮ್ಯಾನ್' ನಿರ್ದೇಶಕ ರಿಚರ್ಡ್ ಡೋನರ್ ನಿಧನ

ಎಎಫ್‍ಪಿ Updated:

ಅಕ್ಷರ ಗಾತ್ರ : | |

ಮೊದಲ ಸೂಪರ್‌ ಮ್ಯಾನ್ ಚಲನಚಿತ್ರ, ದಿ ಗೂನೀಸ್ ಮತ್ತು ಇತರ ಬ್ಲಾಕ್‌ ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತ ಚಲನಚಿತ್ರ ನಿರ್ಮಾಪಕ ರಿಚರ್ಡ್ ಡೋನರ್ ಸೋಮವಾರ ನಿಧನರಾಗಿದ್ದಾರೆ ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಡೋನರ್ ಅವರು 1976ರ ಹಾರರ್ ಕ್ಲಾಸಿಕ್ 'ದಿ ಒಮೆನ್', 1987ರ ಲೆಥಾಲ್ ವೆಪನ್, ಸ್ಕ್ರೂಜ್ಡ್ (1988) ಮತ್ತು 2006 ರಲ್ಲಿ ಅವರ ಅಂತಿಮ ಚಲನಚಿತ್ರ 16 ಬ್ಲಾಕ್ಸ್‌ ಚಿತ್ರಗಳನ್ನು ನಿರ್ದೇಶಿಸಿದ್ದರು.

ಐಎಮ್‌ಡಿಬಿ ಪ್ರಕಾರ, 20ನೇ ಶತಮಾನದ ಅಪ್ರತಿಮ ದೂರದರ್ಶನ ಕಾರ್ಯಕ್ರಮಗಳಾದ ಗೆಟ್ ಸ್ಮಾರ್ಟ್, ಪೆರ್ರಿ ಮೇಸನ್, ಗಿಲ್ಲಿಗನ್ಸ್ ಐಲ್ಯಾಂಡ್ ಮತ್ತು ದಿ ಟ್ವಿಲೈಟ್ ಜೋನ್‌ ಎಪಿಸೋಡ್‌ಗಳನ್ನು ಅವರು ನಿರ್ದೇಶಿಸಿದರು ಮತ್ತು 'ಎಕ್ಸ್-ಮೆನ್' ಮತ್ತು 'ಫ್ರೀ ವಿಲ್ಲಿ' ಸೇರಿದಂತೆ ಬ್ಲಾಕ್‌ಬಸ್ಟರ್ ಹಿಟ್‌ಗಳ ನಿರ್ಮಾಣವನ್ನು ಮಾಡಿದ್ದಾರೆ.

ಡೋನರ್ ಸಹಾಯಕ ಅವರ ಸಾವನ್ನು ದೃಢೀಕರಿಸಿರುವುದಾಗಿ ಹಾಲಿವುಡ್ ರಿಪೋರ್ಟರ್ ಉಲ್ಲೇಖಿಸಿದ್ದಾರೆ. ಆದರೆ ಸಾವಿನ ಯಾವುದೇ ಕಾರಣವನ್ನು ಡೋನರ್ ಅವರ ವ್ಯವಹಾರ ವ್ಯವಸ್ಥಾಪಕಿ ಹಾಗೂ ನಿರ್ಮಾಪಕಿಯಾಗಿರುವ ಪತ್ನಿ ಲಾರೆನ್ ಶುಲರ್ ಡೋನರ್ ಬಹಿರಂಗಪಡಿಸಿಲ್ಲ ಎಂದು ವರದಿಯಾಗಿದೆ.

'ರಿಚರ್ಡ್ ಡೋನರ್ ನೀವು ಊಹಿಸಬಹುದಾದ ಉತ್ಕೃಷ್ಟ ಧ್ವನಿಯನ್ನು ಹೊಂದಿದ್ದರು' ಎಂದು ಗೂನೀಸ್ ನಟ ಸೀನ್ ಆಸ್ಟಿನ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

'ಅವರು ಗಮನವನ್ನು ಸೆಳೆಯುತ್ತಿದ್ದರು ಮತ್ತು ಈ ಮೊದಲು ಯಾರೂ ನಗಲಿಲ್ಲದ ರೀತಿಯಲ್ಲಿ ಅವರು ನಗುತ್ತಿದ್ದರು. ಡಿಕ್ ತುಂಬಾ ಖುಷಿಯಾಗಿದ್ದರು. ಅವರಲ್ಲಿ ನಾನು 12 ವರ್ಷದ ಮಗುವಿನಂತೆ ಗ್ರಹಿಸಿದ್ದೇನೆಂದರೆ ಅವರು ಕಾಳಜಿ ವಹಿಸುತ್ತಿದ್ದರು. ಅವರೆಷ್ಟು ಕಾಳಜಿ ವಹಿಸಿದ್ದಾರೋ ಅಷ್ಟು ನಾನು ಪ್ರೀತಿಸುತ್ತೇನೆ' ಎಂದು ಆಸ್ಟಿನ್ 1985ರಲ್ಲಿ ಚಲನಚಿತ್ರವೊಂದರಲ್ಲಿ ನಟಿಸಿದ ಸಮಯದ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಹಾಲಿವುಡ್ ರಿಪೋರ್ಟರ್ ಪ್ರಕಾರ, ಡೋನರ್ ಬ್ರಾಂಕ್ಸ್‌ನಲ್ಲಿ ಜನಿಸಿದರು ಮತ್ತು ನ್ಯೂಯಾರ್ಕ್‌ನಲ್ಲಿ ಬೆಳೆದರು ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು