ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಜಾ ಆಮದು ಪ್ರಕರಣ; ಖ್ಯಾತ ಮಾಡೆಲ್‌ ಜಿಜಿ ಹಡೀಡ್‌ ಬಂಧನ

Published 19 ಜುಲೈ 2023, 3:15 IST
Last Updated 19 ಜುಲೈ 2023, 3:15 IST
ಅಕ್ಷರ ಗಾತ್ರ

ಬ್ರಿಟನ್‌: ಗಾಂಜಾ ಆಮದು ಮತ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಮಾಡೆಲ್‌ ಜಿಜಿ ಹಡೀಡ್‌ ಅವರನ್ನು ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಹೊರಬಂದಿದ್ದಾರೆ.

ಜುಲೈ 10ರಂದು ಈ ಘಟನೆ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತೆ ಲಿಯಾ ನಿಕೋಲ್ ಮೆಕಾರ್ಥಿಯೊಂದಿಗೆ ಬ್ರಿಟನ್‌ನ ಕೇಮನ್‌ ದ್ವೀಪಕ್ಕೆ ಹೋಗಿದ್ದು, ಈ ವೇಳೆ ಗಾಂಜಾ ಆಮದು ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಕೇಮನ್ ಮಾರ್ಲ್ ರೋಡ್ ವರದಿ ಮಾಡಿದೆ.

ದ್ವೀಪದಿಂದ ಹಿಂದಿರುಗುವ ವೇಳೆ ಓವನ್ ರಾಬರ್ಟ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಗ್ ಸ್ಕ್ಯಾನ್‌ ಮಾಡಿದ್ದು, ಈ ವೇಳೆ ಗಾಂಜಾ ಆಮದು ಮಾಡಿರುವ ಬಗ್ಗೆ ಅನುಮಾನ ಬಂದಿದೆ. ಕೂಲಂಕಷವಾಗಿ ಪರಿಶೀಲಿಸಿದ ಅಧಿಕಾರಿಗಳಿಗೆ ಗಾಂಜಾ ಮತ್ತು ಗಾಂಜಾ ಸೇವನೆಗೆ ಬಳಸುವ ಉಪಕರಣಗಳು ಪತ್ತೆಯಾಗಿವೆ.

ಗಾಂಜಾ ಆಮದು ಮತ್ತು ಸೇವನೆ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿತ್ತು. ಕೈದಿಗಳ ಕೇಂದ್ರದಲ್ಲಿ ವಿಚಾರಣೆ ನಡೆಸಿದ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ಜುಲೈ 12ರಂದು ನ್ಯಾಯಾಲಯದ ಮುಂದೆ ಹಾಜರಾಗಿ ತಪ್ಪೊಪ್ಪಿಕೊಂಡಿದ್ದರು. ನ್ಯಾಯಾಲಯ ಇಬ್ಬರಿಗೂ $1000 ದಂಡ ವಿಧಿಸಿದೆ ಎಂದು ವರದಿಯಾಗಿದೆ.

ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಮಾಡೆಲ್‌

ನಂಬರ್‌ ವನ್‌ ಮಾಡೆಲ್‌ ಎಂದು ಹೆಸರು ಪಡೆದಿದ್ದ ಜಿಜಿ ಹಡೀಡ್‌ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಖ್ಯಾತ ಗಾಯಕ ಝ್ಯಾನ್‌ ಮಲಿಕ್‌ ಜೊತೆ ಡೇಟಿಂಗ್‌ ನಡೆಸಿದ್ದು, ಇವರಿಬ್ಬರಿಗೂ 'ಖಾಯ್‌' ಎಂಬ ಹೆಸರಿನ ಮಗಳಿದ್ದಾಳೆ. 2021ರಲ್ಲಿ ಈ ಜೋಡಿ ಬೇರೆಯಾಗಿತ್ತು.

ಇತ್ತೀಚೆಗೆ 'ನೀತಾ ಮುಕೇಶ್‌ ಅಂಬಾನಿ ಕಲ್ಚರಲ್ ಸೆಂಟರ್‌' ಉದ್ಘಾಟನೆ ವೇಳೆ ಭಾರತಕ್ಕೆ ಬಂದಿದ್ದ ಜಿಜಿ, ಸೀರೆಯಲ್ಲಿ ಮಿಂಚಿದ್ದರು. ತಮ್ಮ ಅಭೂತಪೂರ್ವ ಫ್ಯಾಷನ್‌ ಶೈಲಿಯಿಂದಲೇ ಹಲವಾರು ಅಭಿಮಾನಿಗಳನ್ನು ಜಿಜಿ ಪಡೆದಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT