ಎನ್‌ಎಸ್‌ಜಿ ಕಮಾಂಡೊ ಸೂರ್ಯ!

ಸೋಮವಾರ, ಏಪ್ರಿಲ್ 22, 2019
29 °C

ಎನ್‌ಎಸ್‌ಜಿ ಕಮಾಂಡೊ ಸೂರ್ಯ!

Published:
Updated:

ಕಾಲಿವುಡ್‌ ಸ್ಟಾರ್‌ ಸೂರ್ಯ, ಪ್ರಧಾನಮಂತ್ರಿಯೊಬ್ಬರಿಗೆ ವಿಶೇಷ ಭದ್ರತಾ ಪಡೆ ಎನ್‌ಎಸ್‌ಜಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ! ಈ ವಿಶೇಷ ಗೆಟಪ್ಪಿನಲ್ಲಿ ಅವರು ಕಾಣಿಸಿಕೊಳ್ಳಲಿರುವುದು ‘ಕಾಪ್ಪಾನ್‌’ ಚಿತ್ರದಲ್ಲಿ.

ಮಲಯಾಳಂ ಚಿತ್ರರಂಗದ ಮೇರುನಟ ಮೋಹನ್‌ಲಾಲ್‌ ಈ ಚಿತ್ರದಲ್ಲಿ ಚಂದ್ರಕಾಂತ್‌ ವರ್ಮಾ ಹೆಸರಿನ ಪ್ರಧಾನಮಂತ್ರಿಯ ಪಾತ್ರ ಮಾಡಿದ್ದಾರೆ. ರಾಜಕೀಯ ಮತ್ತು ರಾಜಕಾರಣಿಯ ಕತೆಯುಳ್ಳ ಚಿತ್ರ ಇದೆಂದು ಮೇಲ್ನೋಟಕ್ಕೆ ಅನಿಸಿದರೂ, ಚಿತ್ರ ಬೇರೆಯೇ ಕತೆ ಹೇಳುತ್ತದೆ ಎನ್ನುತ್ತದೆ ಚಿತ್ರತಂಡ.

‘ಕಾಪ್ಪಾನ್‌’ ಆ್ಯಕ್ಷನ್‌ ಕಾಮಿಡಿ ಎಂದು ಹೇಳಲಾಗುತ್ತಿದೆ. ಕೆ.ವಿ. ಆನಂದ್‌ ನಿರ್ದೇಶನದ ಈ ಚಿತ್ರದಲ್ಲಿ ಸೂರ್ಯ ಈಗ ತಾನೇ ಸೇರ್ಪಡೆಯಾಗಿದ್ದಾರೆ. ಪ್ರಧಾನಮಂತ್ರಿ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡುವ ಸನ್ನಿವೇಶಗಳನ್ನು ಚಿತ್ರ ಒಳಗೊಂಡಿದೆ. ಹಾಗಾಗಿ ಹಲವು ದೇಶಗಳಲ್ಲಿ ಸೂರ್ಯ–ಮೋಹನ್‌ಲಾಲ್‌ ಜೋಡಿ ಚಿತ್ರೀಕರಣದಲ್ಲಿ ಭಾಗಿಯಾಗಲಿದೆ.

ಕಾಲಿವುಡ್‌ನ ನವ ವಿವಾಹಿತ ಜೋಡಿ ಆರ್ಯ ಮತ್ತು ಸಯ್ಯೇಷಾ ಕೂಡಾ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಲೈಕಾ ನಿರ್ಮಾಣದ ಈ ಚಿತ್ರದಲ್ಲಿ ಹ್ಯಾರಿಸ್‌ ಜಯರಾಜ್‌ ಸಂಗೀತ ನಿರ್ದೇಶನ ಹಾಗೂ ಅಭಿನಂದನ್‌ ರಾಮಾನುಜಂ ಸಿನೆಮಾಟೊಗ್ರಾಫರ್‌ ಹೊಣೆ ಹೊತ್ತಿದ್ದಾರೆ.

ಈಗಾಗಲೇ ‘ಲೂಸಿಫರ್‌’ನಲ್ಲಿ ರಾಜಕಾರಣಿಯ ಪಾತ್ರದಲ್ಲಿ ಮಿಂಚಿರುವ ಮೋಹನ್‌ಲಾಲ್‌ಗೆ ಒಂದೇ ಬಗೆಯ ಕಥಾವಸ್ತುವುಳ್ಳ ಚಿತ್ರಗಳು ಸಿಗುತ್ತಿರುವುದು ಅವರ ರಾಜಕೀಯ ಬದುಕಿಗೆ ಮುನ್ನುಡಿ ಎಂದೂ ಮಾಲಿವುಡ್‌ ಹೇಳುತ್ತಿದೆ. ಆದರೆ ರಾಜಕೀಯ ಪ್ರವೇಶದ ಬಗ್ಗೆ ಮೋಹನ್‌ಲಾಲ್‌ ಇದುವರೆಗೂ ತುಟಿ ‍ಪಿಟಕ್ಕೆಂದಿಲ್ಲ.

ಅದೇನೇ ಇರಲಿ, ತಮಿಳಿನ ಸಿನಿಪ್ರಿಯರಿಗೆ ತಮ್ಮಿಷ್ಟದ ನಟನೊಂದಿಗೆ ಮೋಹನ್‌ಲಾಲ್‌ ಅವರ ಖದರನ್ನೂ ನೋಡುವ ಅವಕಾಶ ಮತ್ತೊಮ್ಮೆ ಸಿಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !