ಬುಧವಾರ, ಆಗಸ್ಟ್ 4, 2021
22 °C

ಅಗಲಿದ ಗೆಳೆಯನಿಗೆ ಭಾವನುಡಿ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವು, ಅವರ ಸಿನಿಮಾ ರಂಗದ ಆಪ್ತೇಷ್ಟರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಸುಶಾಂತ್‌ರೊಂದಿಗೆ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ ಹಲವು ಸಹನಟ–ನಟಿಯರು ಜಾಲತಾಣಗಳ ಮೂಲಕ ತಮ್ಮ ನೋವನ್ನು ಹೊರ ಹಾಕುತ್ತಿದ್ದಾರೆ.

‘ರಾಬ್ತಾ‘ ಸಿನಿಮಾದಲ್ಲಿ ಸುಶಾಂತ್‌ ಜತೆ ತೆರೆ ಹಂಚಿಕೊಂಡಿದ್ದ ನಟಿ ಕೃತಿ ಸನೋನ್‌, ಅಗಲಿದ ಗೆಳೆಯನ ಕುರಿತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದು, ಮನದ ನೋವನ್ನು ಅಕ್ಷರಗಳಲ್ಲಿ ಪೋಣಿಸಿದ್ದಾರೆ. ಆ ಭಾವ ತುಂಬಿದ ಸಾಲುಗಳು ಹೀಗಿವೆ...

'ನಿನ್ನಲ್ಲಿದ್ದ ಅದ್ಭುತ ಬುದ್ಧಿಶಕ್ತಿಯೇ ನಿನಗೆ ಒಳ್ಳೆಯ ಸ್ನೇಹಿತ ಹಾಗೆಯೇ ಕೆಟ್ಟ ವೈರಿಯೂ ಆಯಿತೇನೋ. ನೀನು ಜೀವನದಲ್ಲಿ ಬದುಕುವುದಕ್ಕಿಂತ ಸಾಯುವುದೇ ಸುಲಭ ಎಂದು ತೀರ್ಮಾನಿಸಿರುವುದು ನನ್ನನ್ನು ತುಂಬಾ ಘಾಸಿಗೊಳಿಸಿದೆ.
ನೀನು ಸಾಯುವ ನಿರ್ಧಾರ ತೆಗೆದುಕೊಂಡ ಆ ಕೆಟ್ಟ ಸಮಯದಲ್ಲಿ ನಿನ್ನ ಸುತ್ತಲೂ ಜನರು ಇರಬೇಕಿತ್ತು ಎನ್ನಿಸುತ್ತಿದೆ. ನಿನ್ನ ಸಮಸ್ಯೆಯನ್ನು ಪರಿಹರಿಸಲು ನನಗೆ ಒಂದು ಅವಕಾಶ ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!
ನಿನ್ನನ್ನು ಯಾವಾಗಲೂ ಪ್ರೀತಿಸುತ್ತಿದ್ದವರನ್ನು ಹೀಗೆ ದೂರ ತಳ್ಳಬಾರದಿತ್ತು. ಈಗಲೂ ನನ್ನ ಹೃದಯದ ಒಂದು ಭಾಗ ಸದಾ ನಿನ್ನೊಂದಿಗೆ ಇರುತ್ತದೆ. ನನ್ನ ಹೃದಯದೊಳಗೆ ನೀನು ಯಾವಾಗಲೂ ಇರುತ್ತೀಯಾ...

ಈ ಭಾವನಾತ್ಮಕ ಸಾಲುಗಳ ಜತೆಗೆ ಸುಶಾಂತ್‌ ಅವರೊಂದಿಗೆ ತೆಗೆದುಕೊಂಡಿದ್ದ ಸೆಲ್ಫಿ ಫೋಟೊಗಳನ್ನು ಕೃತಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

‘ರಾಬ್ತಾ’ ಸಿನಿಮಾದಲ್ಲಿ ಸುಶಾಂತ್ ಜೋಡಿಯಾಗಿ ನಟಿಸುವಾಗ ‘ಈ ಸಿನಿಮಾದ ಪ್ರೇಮಕಥೆ ಬಹಳ ಇಷ್ಟವಾಗಿದೆ‘ ಎಂದು ಕೃತಿ ಹೇಳಿಕೊಂಡಿದ್ದರು. ಹಿಂದೆ ಇನ್‌ಸ್ಟಾಗ್ರಾಂನಲ್ಲೂ ಇದನ್ನು ಬರೆದುಕೊಂಡಿದ್ದರು.

 
 
 
 

 
 
 
 
 
 
 
 
 

Sush.. I knew that your brilliant mind was your best friend and your worst enemy.. but it has broken me completely to know that you had a moment in your life where Dying felt easier or better than Living. I so wish you had people around you to get you past THAT moment, i wish you hadn’t pushed the ones who loved you away.. i wish i could have fixed that something which was broken inside you..I couldn’t.. I wish so so many things.... A part of my heart has gone with you..💔 and a part will always keep you alive.. Never stopped praying for your happiness and never will..❤️

Kriti (@kritisanon) ರಿಂದ ಹಂಚಲಾದ ಪೋಸ್ಟ್ ಅವರು ರಂದು

ಸುಶಾಂತ್‌ ಮನೆಗೆ ಅಂಕಿತಾ

ಸುಶಾಂತ್‌ ಮಾಜಿ ಗೆಳತಿ ಅಂಕಿತಾ ಲೋಖಂಡೆ ಮಂಗಳವಾರ ತಮ್ಮ ತಾಯಿಯೊಂದಿಗೆ ಮುಂಬೈನ ಬಾಂದ್ರಾದಲ್ಲಿರುವ ಸುಶಾಂತ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಸರ್ಬಜಿತ್‌ ಸಿನಿಮಾ ನಿರ್ಮಾಪಕ ಸಂದೀಪ್ ಸಿಂಗ್ ಸಹ ಇದ್ದರು.

ಸುಶಾಂತ್ ಮತ್ತು ಅಂಕಿತಾ ‘ಪವಿತ್ರ ರಿಶ್ತಾ’ ಧಾರಾವಾಹಿ ಮೂಲಕ ಸ್ನೇಹಿತರಾಗಿ, ಪರಸ್ಪರ ಪ್ರೀತಿಸಿ ಆರು ವರ್ಷಗಳ ಕಾಲ ‘ಸಹಜೀವನ’ ನಡೆಸಿದ್ದರು. 2016ರಲ್ಲಿ ಇಬ್ಬರು ಬೇರೆಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು