ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಟಿ ರಿಯಾ ಚಕ್ರವರ್ತಿ ಸಹೋದರ ಶೌವಿಕ್‌ಚಕ್ರವರ್ತಿ, ಸುಶಾಂತ್ ಅವರ ಮ್ಯಾನೇಜರ್ ಸಾಮ್ಯುಯೆಲ್ ಮಿರಾಂದ್ ಅವರ ಮನೆ ಮೇಲೆ ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.
ಎನ್‌ಸಿಬಿ ತಂಡವುಶುಕ್ರವಾರ ಬೆಳಿಗ್ಗೆ 6.30 ರಿಂದ ಸಾಂತಕ್ರೂಸ್‌ನಲ್ಲಿರುವ ಶೌವಿಕ್ ಮನೆ ಮತ್ತು ಅಂಧೇರಿಯಲ್ಲಿರುವ ಮಿರಾಂದ್ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ರಿಯಾ ಚಕ್ರವರ್ತಿ ಅವರ ಮನೆಯಲ್ಲಿಶೌವಿಕ್ ವಾಸವಾಗಿದ್ದಾರೆ.
‘ಸುಶಾಂತ್ ಸಿಂಗ್ ಸಾವಿನ ಪ್ರಕರಣದಡಿ ಶೌವಿಕ್ ಮತ್ತು ಮಿರಾಂದ್ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದು ತನಿಖೆಯ ಭಾಗವಾಗಿದೆ’ ಎಂದು ಎನ್‌ಸಿಬಿ ಉಪ ನಿರ್ದೇಶಕ ಕೆ.ಪಿ.ಸಿ. ಮಲ್ಹೋತ್ರ ಹೇಳಿದರು.
‘ಶೋಧದ ವೇಳೆ ಕೆಲವೊಂದು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸುಶಾಂತ್ ಸಾವಿನ ಪ್ರಕರಣದ ಮಾದಕವಸ್ತು ಆಯಾಮದಲ್ಲಿ ಈಗಾಗಲೇ ಮಹಾರಾಷ್ಟ್ರದಲ್ಲಿ ಇಬ್ಬರು ಶಂಕಿತ ಡ್ರಗ್ ಸರಬರಾಜುದಾರರು ಸೇರಿದಂತೆ ಮೂವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.