ಮಂಗಳವಾರ, ಜುಲೈ 27, 2021
27 °C

‘ಕ್ಷಣಿಕ ಜೀವನ...’ ಮುನ್ನೆಲೆಗೆ ಬಂದ ಸುಶಾಂತ್‌ ಸಿಂಗ್ ಇನ್‌ಸ್ಟಾಗ್ರಾಂ ಪೋಸ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Sushant Singh Rajput

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೆಲವೇ ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ‘ಕ್ಷಣಿಕ ಜೀವನ’ಕ್ಕೆ ಸಂಬಂಧಿಸಿ ಪೋಸ್ಟ್ ಮಾಡಿದ್ದರು. ಅದೀಗ ಅವರ ಆತ್ಮಹತ್ಯೆಯೊಂದಿಗೆ ಮತ್ತೆ ಮುನ್ನೆಲೆಗೆ ಬಂದಿದೆ.

ತಮ್ಮ ಹಾಗೂ ತಾಯಿಯ ಕಪ್ಪು–ಬಿಳುಪಿನ ಚಿತ್ರವೊಂದನ್ನು ಜೂನ್ 3ರಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಸುಶಾಂತ್ ಸಿಂಗ್, ಅದರ ಜತೆ ಉಲ್ಲೇಖಿಸಿದ್ದ ಒಕ್ಕಣೆ ಹೀಗಿದೆ; ‘ಕಣ್ಣೀರಿನ ಹನಿ ಆವಿ ಆಗುತ್ತಿರುವಾಗ ಹಿಂದಿನದ್ದೆಲ್ಲ ಮಸುಕಾಗಿದೆ. ಅಂತ್ಯವಿಲ್ಲದ ಕನಸುಗಳು ನಗುವಿನ ಚಾಪವನ್ನು ಕೆತ್ತನೆ ಮಾಡುತ್ತವೆ. ಇವೆರಡರ ನಡುವೆ ಕ್ಷಣಿಕ ಜೀವನ ಹೊಯ್ದಾಟ ನಡೆಸುತ್ತಿದೆ’.

ಸುಶಾಂತ್ ಖಿನ್ನೆತೆಯಿಂದ ಬಳಲುತ್ತಿದ್ದರು. ಜತೆಗೆ ತಾಯಿಯ ನೆನಪಿನಿಂದ ಭಾವುಕರಾಗಿದ್ದರು ಎಂದೂ ಹೇಳಲಾಗುತ್ತಿದೆ. ‘ಎಂ.ಎಸ್‌.ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ’ ಸಿನಿಮಾದ ಬಿಡುಗಡೆ ಸಂದರ್ಭ ನೀಡಿದ್ದ ಸಂದರ್ಶನಗಳಲ್ಲಿಯೂ ತಾಯಿಯ ಕುರಿತಾಗಿ ಬಹಳ ಮಾತನಾಡಿದ್ದರು.

ಇನ್ನಷ್ಟು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು