ಭಾನುವಾರ, ಜೂನ್ 20, 2021
29 °C

ಆತ್ಮಹತ್ಯೆಯ ಆ ದಿನ: ಸುಶಾಂತ್ ಸಿಂಗ್ ಮನೆಯ ಅಡುಗೆ ಕೆಲಸದ ನೀರಜ್ ಹೇಳಿಕೆ ಇದು...

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ನಟ ಸುಶಾಂತ್ ಸಿಂಗ್ ರಜಪೂತ್‌ ಸಾವಿನ ಕುರಿತು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ ಅವರ ಆಪ್ತವಲಯ. ಜೂನ್‌ 14 (ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ದಿನ)ರ ವಿದ್ಯಮಾನ ಹಾಗೂ ಸುಶಾಂತ್‌–ರಿಯಾ ಸಂಬಂಧದ ಕುರಿತು ಮಾತನಾಡಿದ್ದಾರೆ ಅಡುಗೆ ಕೆಲಸದ ನೀರಜ್‌. ಆಂಗ್ಲ ಮಾಧ್ಯಮವೊಂದಕ್ಕೆ ನೀರಜ್ ನೀಡಿರುವ ಹೇಳಿಕೆ ಹೀಗಿದೆ.

‘ಜೂನ್‌ 13ರ ರಾತ್ರಿ ಸುಶಾಂತ್ ಸರ್ ಊಟ ಮಾಡಿರಲಿಲ್ಲ. ಅವರು ನಮ್ಮಲ್ಲಿ ಮ್ಯಾಂಗೋ ಶೇಕ್ ತಯಾರಿಸಿ ಕೊಡಲು ಹೇಳಿದ್ದರು. ಜೂನ್‌ 14 ರಂದು ಬೆಳಿಗ್ಗೆ ಕೋಣೆಯಿಂದ ಹೊರ ಬಂದವರು ಕೋಲ್ಡ್ ನೀರು ಕೇಳಿದ್ದರು. ಆದರೆ ಅಂದು ಅವರು ಆರೋಗ್ಯವಾಗಿದ್ದಂತೆ ಕಾಣಿಸಲಿಲ್ಲ. ಯಾಕೋ ಸ್ಪಲ್ಪ ಟೆನ್‌ಷನ್‌ನಲ್ಲಿದ್ದರು. ನನ್ನ ಜೊತೆ ಕೆಲಸ ಮಾಡುವ ಕೇಶವ ಅವರ ಬಳಿ ತಿಂಡಿಗೆ ಏನು ಮಾಡಲಿ ಕೇಳಿದ್ದ. ಅವರು ಎಳನೀರು, ಆರೆಂಜ್ ಜ್ಯೂಸ್ ಹಾಗೂ ಬಾಳೆಹಣ್ಣು ಬೇಕು ಎಂದಿದ್ದರು. ಏಳನೀರು ಹಾಗೂ ಆರೆಂಜ್ ಜ್ಯೂಸ್ ಕುಡಿದ ಮೇಲೆ ಬಾಳೆಹಣ್ಣು ಈಗ ಬೇಡ, ನಂತರ ತಿನ್ನು‌ತ್ತೇನೆ ಎಂದರು. ನಂತರ ರೂಮಿನೊಳಗೆ ಹೋಗಿದ್ದರು. ಮತ್ತೆ ಮಧ್ಯಾಹ್ನ ಕೇಶವ ಊಟಕ್ಕೆ ಏನು ಬೇಕು ಎಂದು ಕೇಳಲು ಹೋದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕೋಣೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಅಲ್ಲದೇ ಅವರು ಯಾವುದೇ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಹಾಗಾಗಿ ನಾವು ಅವರ ಸಹೋದರಿ(ಮಿತು ಸಿಂಗ್‌)ಗೆ ಕರೆ ಮಾಡಿದಾಗ ನಮಗೆ ಬಾಗಿಲು ತೆರೆಯಲು ಪ್ರಯತ್ನಿಸಿ ಎಂದರು. ನಮಗೆ ಬಾಗಿಲು ತೆರೆಯಲು ಸಾಧ್ಯವಾಗಿರಲಿಲ್ಲ. ಆ ಕಾರಣಕ್ಕೆ ನಾವು ಬೀಗ ಒಡೆಯುವವರನ್ನು ಕರೆಸಿ, ಬಾಗಿಲು ತೆರೆದೆವು. ಬೀಗ ಒಡೆಯುವವರು ಹೋಗುವವರೆಗೂ ಸಿದ್ಧಾರ್ಥ್‌ ಪಿಟಾನಿ ಹಾಗೂ ಸ್ಯಾಮುಯೆಲ್‌ ಮಿರಾಂಡ ಕಾದಿದ್ದು ನಂತರ ಒಳ ಹೋಗಿದ್ದಾರೆ ಎಂದಿದ್ದಾರೆ ನೀರಜ್‌. ಅಲ್ಲದೇ ಸುಶಾಂತ್ ಸಹೋದರಿ ಹೇಳಿದ ಕಾರಣಕ್ಕೆ ನಾವು ದೇಹವನ್ನು ಕೆಳಗಿಸಿದ್ದೆವು. ಅಲ್ಲದೇ ನಾವು ಸಿಪಿಆರ್ ಮಾಡಲು ಪ್ರಯತ್ನಿಸಿದ್ದೆವು. ಆದರೆ ಯಾವುದೂ ಕೆಲಸ ಮಾಡಲಿಲ್ಲ’ ಎಂದಿದ್ದಾರೆ.

‘ಅವರ ದೇಹ ಫ್ಯಾನ್‌ನಲ್ಲಿ ನೇತಾಡುತ್ತಿದ್ದಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಅವರ ಸಹೋದರಿ ದೇಹವನ್ನು ಕೆಳಗೆ ಇಳಿಸಲು ಹೇಳಿದ್ದರು. ನಾವು ದೇಹವನ್ನು ಕೆಳಗೆ ಇಳಿಸಿದ ಹೊತ್ತಿಗೆ ಅವರ ಸಹೋದರಿ ಕೂಡ ಬಂದಿದ್ದರು. ನಂತರ ಅವರು ಧರಿಸಿದ್ದ ಬಟ್ಟೆಯನ್ನು ತೆಗೆದು ನೋಡಿದಾಗ ಅವರ ಕುತ್ತಿಗೆಯಲ್ಲಿ ಕಲೆಯಿತ್ತು’ ಎಂದು ಅಂದಿನ ಘಟನೆಗಳನ್ನು ವಿವರಿಸಿದ್ದಾರೆ. 

ಯೂರೋಪ್‌ ಪ್ರವಾಸದ ನಂತರದ ಬದಲಾವಣೆ

ಸುಶಾಂತ್ ಬದುಕಿನಲ್ಲಿ ರಿಯಾ ಆಗಮನ ಹಾಗೂ ಅವರ ಯೂರೋಪ್ ಪ್ರವಾಸದ ಬಗ್ಗೆಯೂ ಮಾತನಾಡಿದ ನೀರಜ್ ‘ರಿಯಾ ಹಾಗೂ ಸುಶಾಂತ್ ಇಬ್ಬರ ಸಂಬಂಧದ ನಡುವೆ ತುಂಬಾನೇ ಖುಷಿ ಇತ್ತು. ಆದರೆ ಅವರು ಯೂರೋಪ್ ಪ್ರವಾಸ ಮಾಡಿ ಬಂದ ಬಳಿಕ ಸುಶಾಂತ್ ಚೆನ್ನಾಗಿರಲಿಲ್ಲ. ಆ ನಂತರ ಅವರು ಬದಲಾಗಿದ್ದಾರೆ ಎಂದಿದ್ದಾರೆ. ಅಲ್ಲದೇ ರಿಯಾ ಒಮ್ಮೆ ನೀರಜ್‌ಗೆ ಕೆಲಸ ವಿಷಯದಲ್ಲಿ ಬೆದರಿಕೆ ಹಾಕಿದ್ದರು ಎಂಬುದನ್ನು ತಿಳಿಸಿದ್ದಾರೆ ನೀರಜ್‌.

’ನಾನು ಒಮ್ಮೆ ಕಸದ ಗಾಡಿಯವರ ಜೊತೆ ಮಾಸ್ಕ್ ಇಲ್ಲದೇ ಮಾತನಾಡುತ್ತಿದ್ದಾಗ ಕೆಲಸ ಬಿಟ್ಟು ಹೋಗುವಂತೆ ಹೆದರಿಸಿದ್ದರು. ಆದರೆ ಆಗ ಸರ್ ಅವರನ್ನು ಸಮಾಧಾನ ಪಡಿಸಿದ್ದರು. ಅಲ್ಲದೇ ಈ ವಿಷಯವನ್ನು ನಾನು ನೋಡಿಕೊಳ್ಳುತ್ತೇನೆ ಎಂದಿದ್ದರು. ಮನೆಯ ವಾತಾವರಣ ನಿಜಕ್ಕೂ ಚೆನ್ನಾಗಿತ್ತು. ಒಂದು ವೇಳೆ ಕೆಲ ನಿಮಿಷಗಳ ಕಾಲ ರಿಯಾ ಮನೆಯಿಂದ ಹೊರ ಹೋದರು ಸುಶಾಂತ್ ಸರ್ ಊಟ ಕೂಡ ಮಾಡುತ್ತಿರಲಿಲ್ಲ. ರಿಯಾ ಅವರ ಅಣ್ಣ ಶೋವಿಕ್ ಹಾಗೂ ಅವರ ಸ್ನೇಹಿತರು ಕೆಲವೊಮ್ಮೆ ಮನೆಗೆ ಬರುತ್ತಿದ್ದರು. ಅವರೆಲ್ಲರೂ ಸೇರಿ ನಗುತ್ತಾ ಇರುತ್ತಿದ್ದರು’ ಎಂದು ಹೇಳಿಕೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು