ʻಲವ್ ಮಾಕ್ಟೇಲ್ 2’ ಸಿನಿಮಾ ಖ್ಯಾತಿಯ ನಟಿ ಸುಶ್ಮಿತಾ ಗೌಡ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಇತ್ತೀಚೆಗೆ ನಟಿ ಸುಶ್ಮಿತಾ ಗೌಡ ಅವರು ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದರು. ಇದೀಗ, ನಟಿ ಸುಶ್ಮಿತಾ ಗೌಡ ಹಾಗೂ ಅಶ್ವಿನ್ ದಂಪತಿ ಗಂಡು ಮಗು ಜನಿಸಿರುವುದರ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಲವ್ ಮಾಕ್ಟೇಲ್ 2 ಚಿತ್ರದಲ್ಲಿ ಜಂಕಿ ಪಾತ್ರದಲ್ಲಿ ನಟಿ ಸುಶ್ಮಿತಾ ಗೌಡ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಮೂಲಕವೇ ನಟಿ ಸುಶ್ಮಿತಾ ಗೌಡ ಜನಪ್ರಿಯತೆ ಪಡೆದುಕೊಂಡಿದ್ದರು. ಲವ್ ಮಾಕ್ಟೇಲ್ ಸಿನಿಮಾ ಬಳಿಕ ನಟಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸಕ್ರಿಯರಾಗಿದ್ದಾರೆ.

2022ರಲ್ಲಿ ಅಶ್ವಿನ್ ಮತ್ತು ಸುಶ್ಮಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸೆಪ್ಟೆಂಬರ್ 16ರಂದು ಗಂಡು ಮಗುವಿಗೆ ಜನ್ಮ ನೀಡಿದ ಸುಶ್ಮಿತಾ ಗೌಡ ಅವರು ಇನ್ಸ್ಟಾಗ್ರಾಮ್ನಲ್ಲಿ ಪುಟ್ಟ ಕೃಷ್ಣನ ಫೋಟೊವನ್ನು ಹಂಚಿಕೊಂಡಿದ್ದಾರೆ. ‘ಪುಟ್ಟ ಪಾದಗಳು, ಅಂತ್ಯವಿಲ್ಲದ ಆಶೀರ್ವಾದಗಳು, ನಮ್ಮ ಪುಟ್ಟ ಕೃಷ್ಣ ಇಲ್ಲಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.