ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್‌; ರಾಬಿಯಾ ಎಂದು ನಾಮಕರಣ

Published 26 ಸೆಪ್ಟೆಂಬರ್ 2023, 3:13 IST
Last Updated 26 ಸೆಪ್ಟೆಂಬರ್ 2023, 3:14 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟಿ ಸ್ವರಾ ಭಾಸ್ಕರ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳಿಗೆ ರಾಬಿಯಾ ಎಂದು ನಾಮರಕರಣ ಮಾಡಿರುವುದಾಗಿ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಖುಷಿ ವಿಚಾರ ಹಂಚಿಕೊಂಡಿರುವ ಅವರು, ಸೆಪ್ಟೆಂಬರ್ 23ರಂದು ಮಗಳು ಜನಿಸಿದ್ದಾಳೆ. ನಮ್ಮ ಪ್ರಾರ್ಥನೆ ಫಲಿಸಿದೆ ಎಂದು ಬರೆದುಕೊಂಡಿದ್ದಾರೆ.

ಮಗುವಿನೊಂದಿಗಿನ ತಮ್ಮ ಮತ್ತು ಪತಿ ಫಹಾದ್‌ ಅಹಮದ್‌ ಪೋಟೊಗಳನ್ನು ಹಂಚಿಕೊಂಡಿದ್ದಾರೆ.

‘ದೇವರ ಆರ್ಶಿವಾದದಿಂದ ನಮ್ಮ ಬಹುದಿನ ಪ್ರಾರ್ಥನೆ ಫಲಿಸಿದೆ. ಸೆಪ್ಟೆಂಬರ್‌ 23ರಂದು ಮಗಳು ಜನಿಸಿದ್ದು, ರಾಬಿಯಾ ಎಂದು ನಾಮಕರಣ ಮಾಡಲಾಗಿದೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ನಮಗಿದು ಹೊಸ ಜಗತ್ತು’ ಎಂದು ಹೇಳಿದ್ದಾರೆ.

ಜೂನ್‌ನಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದರು. ಅಭಿಮಾನಿಗೊಂದಿಗೆ ತಮ್ಮ ಬೇಬಿ ಬಂಪ್‌ ಪೋಟೋಗಳನ್ನು ಹಂಚಿಕೊಂಡಿದ್ದರು.

ಇದೇ ವರ್ಷ ಫೆಬ್ರುವರಿಯಲ್ಲಿ ಸ್ವರಾ ಭಾಸ್ಕರ್ ಮತ್ತು ಫಹದ್‌ ಅಹಮದ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಫಹದ್‌ ಅವರು ಸಮಾಜವಾದಿ ಪಕ್ಷದ ಯುವ ಘಟಕ ‘ಸಮಾಜವಾದಿ ಯುವಜನ ಸಭಾ’ದ ಅಧ್ಯಕ್ಷರಾಗಿದ್ದಾರೆ. ಸ್ವರಾ ಭಾಸ್ಕರ್‌ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT