ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶುಗರ್‌ಲೆಸ್’‌ನಲ್ಲಿ ಸ್ವೀಟ್‌ ಬೆಡಗಿ

Last Updated 30 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಕೆ.ಎಂ. ಶಶಿಧರ್‌ ನಿರ್ದೇಶನದ ‘ಶುಗರ್‌ಲೆಸ್‌’ ಸಿನಿಮಾದಲ್ಲಿ ಶಿವಮೊಗ್ಗದ‘ಸ್ವೀಟ್’‌ ಬೆಡಗಿ ಪ್ರಿಯಾಂಕ ತಿಮ್ಮೇಶ್‌ ನಾಯಕಿಯಾಗಿ ನಟಿಸಲಿದ್ದಾರೆ.

‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದು, ಇವರಿಗೆ ಜೋಡಿಯಾಗಿ ಪ್ರಿಯಾಂಕ ಕಾಣಿಸಿಕೊಳ್ಳಲಿದ್ದಾರೆ. ಇವರು ಈಗಾಗಲೇ ‘ಗಣಪ’ ಮತ್ತು ಗಣೇಶ್‌ ನಟನೆಯ ‘ಪಟಾಕಿ’ ಸಿನಿಮಾಗಳಲ್ಲಿ ಕನ್ನಡ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಇದಲ್ಲದೇ ಮಾಲಿವುಡ್‌ಗೂ ಕಾಲಿಟ್ಟ ಈ ಬೆಡಗಿ, ಮಲಯಾಳಂ ನಟ ನಿವಿನ್‌ ಪೌಲಿ ಅಭಿನಯದ ‘ಕಾಯಂಕುಳಂ ಕೊಚ್ಚುಣ್ಣಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಸಣ್ಣ ಬಿಡುವಿನ ನಂತರ ಇವರು, ‘ಶುಗರ್‌ಲೆಸ್‌’ ಮೂಲಕ ಕನ್ನಡ ಸಿನಿರಸಿಕರಿಗೆ ರಂಜನೆಯ ಸಿಹಿ ಉಣಿಸಲು ಸಜ್ಜಾಗಿದ್ದಾರೆ.ಸದ್ಯ ಪ್ರಿಯಾಂಕ ನಟನೆಯ ‘ಭೀಮಸೇನ ನಳಮಹಾರಾಜ’ ಮತ್ತು ‘ಅರ್ಜುನ್‌ ಗೌಡ’ಚಿತ್ರಗಳು ಬಿಡುಗಡೆಗೆ ಬಾಕಿ ಇವೆ.

‘ಡಾಟರ್‌ ಆಫ್‌ ಪಾರ್ವತಮ್ಮ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಕೆ.ಎಂ. ಶಶಿಧರ್‌ ‘ಶುಗರ್‌ಲೆಸ್‌’ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. ಕಥೆ, ಚಿತ್ರಕಥೆಯ ನೊಗವನ್ನು ಅವರೇ ಹೊತ್ತಿದ್ದಾರೆ. ‍ಪುಷ್ಕರ್‌ ಫಿಲ್ಮ್ಸ್‌ ಈ ಚಿತ್ರ ಅರ್ಪಿಸುತ್ತಿದ್ದು, ದಿಶಾ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿ ನಿರ್ಮಿಸಲಾಗುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ ಎರಡನೇ ವಾರದಿಂದ ಶೂಟಿಂಗ್ ಶುರುವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT