ದಕ್ಷಿಣ ಸಿನಿರಂಗ ಬಿಡಲಾರೆ: ತಾಪ್ಸಿ

ಮಂಗಳವಾರ, ಜೂನ್ 25, 2019
29 °C
ತಾಪ್ಸಿ ಪನ್ನು

ದಕ್ಷಿಣ ಸಿನಿರಂಗ ಬಿಡಲಾರೆ: ತಾಪ್ಸಿ

Published:
Updated:
Prajavani

ಬಾಲಿವುಡ್‌ನ ಒಂದು ಸಿನಿಮಾ ಹಿಟ್‌ ಆದರೆ ಸಾಕು ತಾವು ಹತ್ತಿಬಂದ ಏಣಿಯನ್ನು ಜಾಡಿಸಿ ಒಡೆಯುವವರೇ ಹೆಚ್ಚು. ದೀಪಿಕಾ ಪಡುಕೋಣೆಯಿಂದ ಹಿಡಿದು ನಿನ್ನೆ ಮೊನ್ನೆ ಬಂದ ನಟಿಯರ ತನಕ ಸಾಲುಸಾಲು ಉದಾಹರಣೆಗಳನ್ನು ಇದಕ್ಕೆ ನೀಡಬಹುದು. ಆದರೆ, ಇದಕ್ಕೆ ಅಪವಾದವೆನ್ನುವಂತಿದ್ದಾರೆ ನಟಿ ತಾಪ್ಸಿ ಪನ್ನು. 

ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳುವುದಕ್ಕೂ ಮುನ್ನ ತಾಪ್ಸಿ ದಕ್ಷಿಣ ಭಾರತದ ಸಿನಿರಂಗದಲ್ಲಿ ತಮ್ಮ ಆರಂಭಿಕ ಹೆಜ್ಜೆಗಳನ್ನು ಇಟ್ಟವರು. ಇಲ್ಲಿಂದಲೇ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ತಾಪ್ಸಿ, ಇಂದಿಗೂ ತಮ್ಮ ಮೊದಲ ಹೆಜ್ಜೆಗಳನ್ನು ಮರೆತಿಲ್ಲ. ಹಾಗಾಗಿಯೇ ಅವರು ಬಾಲಿವುಡ್‌ನಲ್ಲಿ ತಾವೆಷ್ಟೇ ಜನಪ್ರಿಯತೆ ಗಳಿಸಿದರೂ, ದಕ್ಷಿಣದ ಸಿನಿರಂಗವನ್ನು ಬಿಲ್‌ಕುಲ್ ಬಿಡಲಾರೆ ಎಂದು ಹೇಳುತ್ತಾರೆ. 

‘ಎಷ್ಟೇ ಬ್ಯುಸಿ ಶೆಡ್ಯೂಲ್ ಇದ್ದರೂ ವರ್ಷಕ್ಕೆ ಒಂದಾದರೂ ದಕ್ಷಿಣ ಭಾಷೆಯ ಸಿನಿಮಾದಲ್ಲಿ ಅಭಿನಯಿಸುವೆ’ ಅನ್ನುವುದು ತಾಪ್ಸಿ ಅಚಲ ನಿರ್ಧಾರ. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣದ ಬಹುತೇಕ ಭಾಷೆಗಳನ್ನು ಅರಿತಿರುವ ಅವರು, ‘ದಕ್ಷಿಣದ ಸಿನಿಮಾಗಳಲ್ಲಿ ಅಭಿನಯಿಸುವುದನ್ನು ಬಿಡಲೊಲ್ಲೆ. ಸಿನಿಮಾದ ಬಗ್ಗೆ ಏನಾದರೂ ಅರಿತಿದ್ದರೆ ಅದು ಇಲ್ಲಿಂದಲೇ. ಅದಕ್ಕಾಗಿ ನಾನು ದಕ್ಷಿಣದ ಸಿನಿಮಾರಂಗಕ್ಕೆ ಧನ್ಯವಾದ ಸಲ್ಲಿಸುತ್ತೇನೆ’ ಅನ್ನುವ ವಿನಮ್ರತೆ ತಾಪ್ಸಿಯದ್ದು. 

ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ತಾಪ್ಸಿ ಅಭಿನಯದ ‘ಗೇಮ್ ಓವರ್’ ಸಿನಿಮಾ ನಾಳೆ ತೆರೆಕಾಣಲಿದೆ. ಅಶ್ವಿನ್ ಶರವಣನ್ ಈ ಸಿನಿಮಾ ನಿರ್ದೇಶಿಸಿದ್ದು, ಇದರಲ್ಲಿ ತಾಪ್ಸಿಯದ್ದು ವಿಭಿನ್ನ ಪಾತ್ರ. ಸದ್ಯಕ್ಕೆ ತಾಪ್ಸಿ ಕೈಯಲ್ಲಿ ‘ಸಾಂಡ್ ಕಿ ಆಂಖೆ’, ‘ಮಿಷನ್ ಮಂಗಲ್’ ಸಿನಿಮಾಗಳಿವೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !