ಭಾನುವಾರ, ಆಗಸ್ಟ್ 1, 2021
26 °C

‘ಲವ್‌ ಮಾಕ್ಟೇಲ್‌’ ತೆಲುಗು ರಿಮೇಕ್‌ನಲ್ಲಿ ತಮನ್ನಾ ನಟನೆ

ಪ್ರಜಾವಾಣಿ ಫೀಚರ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ನಟಿಸಿದ್ದ ಕನ್ನಡದ ‘ಲವ್‌ ಮಾಕ್ಟೇಲ್‌’ ರೊಮ್ಯಾಂಟಿಕ್‌ ಆ್ಯಕ್ಷನ್‌ ಚಿತ್ರ. ಥಿಯೇಟರ್‌ನಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಒಟಿಟಿಯಲ್ಲಿ ಪ್ರಸಾರವಾದಾಗಲೂ ಜನರಿಂದ ಒಳ್ಳೆಯ ಸ್ಪಂದನೆ ಸಿಕ್ಕಿತ್ತು. ಹಾಗಾಗಿಯೇ, ಈ ಜೋಡಿ ‘ಲವ್‌ ಮಾಕ್ಟೇಲ್‌ 2’ ಚಿತ್ರಕ್ಕೆ ಸಿದ್ಧತೆ ನಡೆಸಿದೆ.

ಬಾಕ್ಸ್‌ಆಫೀಸ್‌ನಲ್ಲೂ ಒಳ್ಳೆಯ ಕಲೆಕ್ಷನ್‌ ಕಂಡ ಈ ಚಿತ್ರ ಈಗ ತೆಲುಗಿನಲ್ಲಿ ರಿಮೇಕ್‌ ಆಗುತ್ತಿದೆ. ‘ಮೈನಾ’ ಚಿತ್ರದ ಖ್ಯಾತಿಯ ನಿರ್ದೇಶಕ ನಾಗಶೇಖರ್ ರಿಮೇಕ್‌ಗೆ ಆ್ಯಕ್ಷನ್‌ ಹೇಳಲು ನಿರ್ಧರಿಸಿದ್ದಾರೆ. ಈ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ಮೊದಲ ಹೆಜ್ಜೆ ಇಡುತ್ತಿರುವ ಖುಷಿಯಲ್ಲಿದ್ದಾರೆ.

ಕನ್ನಡದಲ್ಲಿ ಡಾರ್ಲಿಂಗ್‌ ಕೃಷ್ಣ ಅವರೇ ಈ ಚಿತ್ರ ನಿರ್ದೇಶಿಸಿದ್ದರು. ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ನಟಿಸಿದ್ದ ಪಾತ್ರಗಳಲ್ಲಿ ತಮನ್ನಾ ಭಾಟಿಯಾ ಮತ್ತು ಸತ್ಯದೇವ್‌ ನಟಿಸಲಿದ್ದಾರಂತೆ. ಕಥೆಯ ಮೂಲ ಎಳೆಯನ್ನು ತೆಗೆದುಕೊಂಡು ತೆಲುಗಿನ ನೇಟಿವಿಟಿಗೆ ತಕ್ಕಂತೆ ಸಿನಿಮಾ ನಿರ್ದೇಶಿಸಲು ನಾಗಶೇಖರ್‌ ನಿರ್ಧರಿಸಿದ್ದಾರೆ.

ಭವಾನಿ ರವಿ ಅವರೊಟ್ಟಿಗೆ ನಾಗಶೇಖರ್‌ ಕೂಡ ಇದಕ್ಕೆ ಬಂಡವಾಳ ಹೂಡಲಿದ್ದಾರೆ. ಸೆಪ್ಟೆಂಬರ್‌ 15ರಂದು  ಶೂಟಿಂಗ್‌ ಶುರುವಾಗುವ ನಿರೀಕ್ಷೆಯಿದೆ. ಕೀರ್ವಾಣಿ ಅವರ ಪುತ್ರ ಕಾಳಭೈರವ ಸಂಗೀತ ಸಂಯೋಜಿಸಲಿದ್ದಾರೆ. ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಇರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು