ಶುಕ್ರವಾರ, ಮೇ 20, 2022
25 °C

18 ವರ್ಷಗಳ ವೈವಾಹಿಕ ಜೀವನ ಮುರಿದ ಧನುಷ್‌-ಐಶ್ವರ್ಯಾ ರಜನಿಕಾಂತ್‌ ಜೋಡಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ದಕ್ಷಿಣ ಚಿತ್ರರಂಗದ ಹೆಸರಾಂತ ನಟ ಧನುಷ್‌ ಹಾಗೂ ಚಿತ್ರ ನಿರ್ಮಾಪಕಿ, ಪತ್ನಿ ಐಶ್ವರ್ಯಾ ರಜನಿಕಾಂತ್‌ ಅವರು 18 ವರ್ಷಗಳ ವೈವಾಹಿಕ ಜೀವನದಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ನಟ ಧನುಷ್‌ ಅವರು ಸೋಮವಾರ ಟ್ವಿಟರ್‌ನಲ್ಲಿ ದಾಂಪತ್ಯ ಜೀವನದಿಂದ ಪರಸ್ಪರ ಪ್ರತ್ಯೇಕಗೊಳ್ಳುತ್ತಿರುವುದಾಗಿ ಘೋಷಿಸಿದ್ದಾರೆ.

ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್‌ ಅವರನ್ನು ಧನುಷ್‌ ಅವರು 2004ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 2006ರಲ್ಲಿ ಯಾತ್ರ ಮತ್ತು 2010ರಲ್ಲಿ ಲಿಂಗ ಜನಿಸಿದ್ದಾರೆ.

38 ವರ್ಷದ ಧನುಷ್‌ ಹಾಗೂ 40 ವರ್ಷದ ಐಶ್ವರ್ಯ ವಿಚ್ಛೇದನ ಪಡೆಯುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ.

'18 ವರ್ಷ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಪರಸ್ಪರ ಹಿತೈಷಿಗಳಾಗಿ ಕಳೆದಿದ್ದೇವೆ. ಬೆಳೆಯುತ್ತ, ಅರ್ಥೈಸಿಕೊಳ್ಳುತ್ತ, ಹೊಂದಿಸಿಕೊಳ್ಳುತ್ತ, ಸರಿದೂಗಿಸಿಕೊಳ್ಳುತ್ತ ನಮ್ಮ ದಾಂಪತ್ಯ ಜೀವನ ಸಾಗಿತು. ಪರಸ್ಪರರ ದಾರಿಗಳು ಪ್ರತ್ಯೇಕಗೊಂಡಿರುವ ಸ್ಥಳದಲ್ಲಿ ನಾವಿಂದು ಇದ್ದೇವೆ. ಐಶ್ವರ್ಯಾ ಮತ್ತು ನಾನು ವೈವಾಹಿಕ ಜೀವನದಿಂದ ಪ್ರತ್ಯೇಕಗೊಳ್ಳಲು ನಿರ್ಧರಿಸಿದ್ದೇವೆ. ಸಮಯ ತೆಗೆದುಕೊಂಡು ಈ ನಿರ್ಧಾರಕ್ಕೆ ಬಂದಿದ್ದೇವೆ' ಎಂದು ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

'ದಯವಿಟ್ಟು ನಮ್ಮ ನಿರ್ಧಾರಗಳನ್ನು ಗೌರವಿಸಿ ಮತ್ತು ಇದಕ್ಕಾಗಿ ನಮಗೆ ಅಗತ್ಯವಿರುವ ಏಕಾಂತತೆಯನ್ನು ಕೊಡಿ. ಓಂ ನಮ ಶಿವಾಯ! ಪ್ರೀತಿಯನ್ನು ಹಂಚಿ, ಡಿ' ಎಂದು ಧನುಷ್‌ ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ.

🙏🙏🙏🙏🙏 pic.twitter.com/hAPu2aPp4n

— Dhanush (@dhanushkraja) January 17, 2022

ಐಶ್ವರ್ಯಾ ಅವರು ಇದೇ ಒಕ್ಕಣೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 'ತಲೆಬರಹದ ಅಗತ್ಯವಿಲ್ಲ... ನಿಮ್ಮಿಂದ ಕೇವಲ ಅರ್ಥೈಸಿಕೊಳ್ಳುವ ಮನಸ್ಸು ಮತ್ತು ಪ್ರೀತಿ ಬೇಕಾಗಿದೆ' ಎಂದು ಐಶ್ವರ್ಯಾ ಪೋಸ್ಟ್‌ ಮಾಡಿದ್ದಾರೆ.

 

 

 

 

 

View this post on Instagram

 

 

 

 

 

 

 

 

 

 

 

A post shared by Aishwaryaa R Dhanush (@aishwaryaa_r_dhanush)

ಐಶ್ವರ್ಯಾ ಅವರು ತಮಿಳಿನ '3' ಎಂಬ ರೋಮ್ಯಾಂಟಿಕ್‌ ಥ್ರಿಲ್ಲರ್‌ ಮತ್ತು 'ವಾಯ್‌ ರಾಜಾ ವಾಯ್‌' ಎಂಬ ಬ್ಲಾಕ್‌ ಕಾಮಿಡಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಕರ್ಣನ್‌, ಅಸುರನ್‌ ಚಿತ್ರಗಳಲ್ಲಿನ ಧನುಷ್‌ ಅವರ ನಟನೆಗೆ ರಾಷ್ಟ್ರದೆಲ್ಲೆಡೆ ಪ್ರಶಂಸೆ ಸಿಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು