ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಫ್ ನಟನೆಯ ‘ತಾಂಡವ್‌’ ಜ.15ಕ್ಕೆ ಬಿಡುಗಡೆ

Last Updated 8 ಜನವರಿ 2021, 19:30 IST
ಅಕ್ಷರ ಗಾತ್ರ

2021ರ ಬಹುನಿರೀಕ್ಷಿತ ವೆಬ್‌ಸರಣಿ ‘ತಾಂಡವ್‌’. ಸೈಫ್ ಅಲಿಖಾನ್ ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ವೆಬ್‌ಸರಣಿ ಜನವರಿ 15ಕ್ಕೆ ಅಮೆಜಾನ್ ಪ್ರೈಮ್‌ ವಿಡಿಯೊದಲ್ಲಿ ಬಿಡುಗಡೆಯಾಗಲಿದೆ. ರಾಜಕೀಯ ಕಥಾಹಿನ್ನೆಲೆ ಇರುವ ಈ ಸರಣಿಯನ್ನು ಅಲಿ ಅಬ್ಬಾಸ್‌ ಜಾಫರ್‌ ನಿರ್ದೇಶನ ಮಾಡಿದ್ದಾರೆ. ಹಿಮಾಂಶು ಕಿಶನ್ ಮೆಹ್ರಾ ಹಾಗೂ ಅಲಿ ಅಬ್ಬಾಸ್ ಜಾಫರ್ ಈ ಸರಣಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಇದರಲ್ಲಿ ಒಟ್ಟು 9 ಎಪಿಸೋಡ್‌ಗಳಿವೆ.

ಟ್ರೇಲರ್‌ ಮೂಲಕ ಹೆಚ್ಚು ನಿರೀಕ್ಷೆ ಹುಟ್ಟು ಹಾಕಿದ್ದ ತಾಂಡವ್‌ನಲ್ಲಿ ಸೈಫ್‌ ಅವರು ಸಮರ ಪ್ರತಾಪ್‌ ಸಿಂಗ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತಮ್ಮ ತಂದೆಯ ನಿಗೂಢ ಸಾವಿನ ಬಳಿಕ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿ ರಾಜಕೀಯ ರಂಗಕ್ಕೆ ಬರುತ್ತಾನೆ ಸಮರ್. ಅನುರಾಧಾ ಎಂಬ ಪ್ರಧಾನಿ ಆಕಾಂಕ್ಷಿಯ ಪಾತ್ರದಲ್ಲಿ ಡಿಂಪಲ್ ಕಪಾಡಿಯಾ ನಟಿಸಿದ್ದಾರೆ. ರಾಜಕೀಯರಂಗದ ಕರಾಳ ಮುಖದ ಪರಿಚಯ ಮಾಡಿಕೊಡುವಂತಿದೆ ಸರಣಿ. ಟ್ರೇಲರ್‌ನಲ್ಲಿ ಕಥಾವಸ್ತುವಿನ ಬಗ್ಗೆ ಹೆಚ್ಚಿನ ವಿವರ ತಿಳಿಸಿಲ್ಲ.

ಈ ವೆಬ್‌ಸರಣಿಯಲ್ಲಿ ಸುನಿಲ್ ಗ್ರೋವರ್‌, ಟಿಗ್ಮಂಶು ಧುಲಿಯಾ, ಕುಮುದ್ ಮಿಶ್ರಾ, ಮೊಹಮದ್‌ ಜಿಸಾನ್‌ ಅಯೂಬ್‌, ಕೃತಿಕಾ ಕಮ್ರಾ, ಸಾರಾ ಜೇನ್ ಡಯಾಸ್, ಗೌಹರ್ ಖಾನ್‌, ಕೃತಿಕಾ ಅವಸ್ಥಿ, ಡಿನೊ ಮೋರಿಯಾ, ಅನೂಪ್ ಸೋನಿ, ಪರೇಶ್‌ ಪಹುಜಾ, ಸಂಧ್ಯಾ ಮೃದುಲ್‌, ಸೋನಾಲಿ ನಗ್ರಾನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಗುಲ್ಲಕ್ ಸೀಸನ್ 2
2019ರ ಜೂನ್‌ನಲ್ಲಿ ಬಿಡುಗಡೆಯಾದ ಗುಲ್ಲಕ್‌ ವೆಬ್‌ಸರಣಿಯ ಮುಂದುವರಿದ ಆವೃತ್ತಿ ‘ಗುಲ್ಲಕ್ ಸೀಸನ್ 2’. ಇದು ಜನವರಿ 15ಕ್ಕೆ ಸೋನಿ ಲಿವ್‌ನಲ್ಲಿ ಬಿಡುಗಡೆಯಾಗಲಿದೆ. ಸೋನಿ ಲಿವ್‌ ಇತ್ತೀಚೆಗೆ ಇದರ ಟ್ರೇಲರ್‌ ಬಿಡುಗಡೆ ಮಾಡಿತ್ತು. ಹೃದಯಕಲಕುವ ಕೌಟುಂಬಿಕ ಕಥೆ ಹೊಂದಿರುವ ಈ ವೆಬ್‌ಸರಣಿಯ ಮೂಲಕ ಮತ್ತೆ ಜನರಿಗೆ ಮನರಂಜನೆ ನೀಡಲು ಬರುತ್ತಿದೆ ಮಿಶ್ರಾ ಕುಟುಂಬ.

ಗುಲ್ಲಕ್‌ನಲ್ಲಿ ಇರುವ ವಿದ್ಯುತ್‌ ಇಲಾಖೆಯಲ್ಲಿ ಕೆಲಸ ಮಾಡುವ ಮಿಶ್ರಾ ಕುಟುಂಬದ ಕಥೆಯನ್ನು ಇಲ್ಲೂ ಮುಂದುವರಿಸಲು ಹೊರಟಂತಿದೆ ನಿರ್ದೇಶಕರು. ಮಿಶ್ರಾ ಕುಟುಂಬದ ಅಪೂರ್ಣ ಸಂಬಂಧಗಳು ಹಾಗೂ ಆಕಾಂಕ್ಷೆಗಳ ಬಗೆಗಿನ ಕಥೆಯನ್ನು ಈ ಸರಣಿ ಹೇಳಲಿದೆ.

ಜಮೀಲ್ ಖಾನ್‌, ಗೀತಾಂಜಲಿ ಕುಲಕರ್ಣಿ, ಸುನೀತಾ ರಾಜ್ವರ್‌ ಹರ್ಷ್‌ ಹಾಗೂ ವೈಭವ್‌ ರಾಜ್ ಗುಪ್ತಾ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT