ಗುರುವಾರ , ಜೂಲೈ 9, 2020
28 °C

ಸುಂದರ ಫೋಟೊ ಹಂಚಿಕೊಂಡು ಅಭಿಮಾನಿಗಳನ್ನು ಖುಷಿಯಲ್ಲಿಟ್ಟ ಶ್ರೀಮುಖಿ!

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಹಿರಿತೆರೆಯಲ್ಲಿ ಅವಕಾಶಗಳೂ ಇದ್ದರೂ ಕಿರುತೆರೆಯಲ್ಲೇ ನೆಲೆ ನಿಂತು ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡ ನಟಿ, ನಿರೂಪಕಿ ಶ್ರೀಮುಖಿ. ಶ್ರೀಮುಖಿಗೆ ಇನ್‌ಸ್ಟಾಗ್ರಾಮ್‌, ಟ್ವಿಟರ್‌ ಹಾಗೂ ಫೇಸ್‌ಬುಕ್‌ನಲ್ಲಿ ಸಿಕ್ಕಾಪಟ್ಟೆ ಫಾಲೋವರ್‌ಗಳಿದ್ದಾರೆ. ಆಕೆಯ ಡ್ರೆಸ್‌ ಕೋಡ್‌ ಮತ್ತು ಕೇಶವಿನ್ಯಾಸ, ಮೇಕಪ್‌ ಕೂಡ ಅನುಕರಿಸುವ ಮಹಿಳಾ ಅಭಿಮಾನಿಗಳು ಇದ್ದಾರೆ.

ನಿಜಮಾಬಾದ್‌ನ ಈ ಚೆಲುವೆ ‘ಬೋಲ್ಡ್‌ ಅಂಡ್‌ ಬ್ಯೂಟಿಫುಲ್’‌ ನಟಿ, ನಿರೂಪಕಿ ಎಂದೇ ತೆಲುಗಿನಲ್ಲಿ ಗುರುತಿಸಲ್ಪಟ್ಟಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿದರೂ ಸತತ ಏಳು ವರ್ಷಗಳಿಂದ ಟಿ.ವಿ ಕಾರ್ಯಕ್ರಮಗಳಲ್ಲೇ ಹೆಚ್ಚು ಮಿಂಚುತ್ತಿದ್ದಾರೆ. ಅಷ್ಟೇ ಜನಪ್ರಿಯತೆಯನ್ನೂ ಹೆಚ್ಚಿಸಿಕೊಂಡು ಅತೀ ಹೆಚ್ಚು ಸಂಭಾವನೆಯ ಪಡೆಯುವ ನಿರೂಪಕಿ ಎನ್ನುವ ಹೆಗ್ಗಳಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ. 

‘ಬಿಗ್ ಬಾಸ್ – 3’ ತೆಲುಗು ರಿಯಾಲಿಟಿ ಶೋನಲ್ಲಿ ಲಾಸ್ಯ ಮತ್ತು ಶ್ರೀಮುಖಿ ದಿನವೊಂದಕ್ಕೆ ಪಡೆದ ಸಂಭಾವನೆ ₹50 ಲಕ್ಷ ಎನ್ನುವ ಮಾತು ತೆಲುಗು ಚಿತ್ರೋದ್ಯಮದಲ್ಲಿ ಬಹುವಾಗಿ ಕೇಳಿಬಂದಿತ್ತು ಕೂಡ.

‘ಅಧುರ್ಸ್’ ಸರಣಿಯಲ್ಲಿ ಕಾಣಿಸಿಕೊಂಡ ಇವರು, 2012ರಲ್ಲಿ ‘ಜುಲಾಯ್’‌ ಚಿತ್ರದಲ್ಲಿ ಪೋಷಕ ನಟಿಯಾಗಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ‘ಪ್ರೇಮಾ ಇಷ್ಕ್ ಕಾದಾಲ್’ ಚಿತ್ರದಲ್ಲಿ ನಾಯಕಿಯಾಗಿ ಬಡ್ತಿ ಪಡೆದವರು ಇವರು. ಕನ್ನಡ ಮತ್ತು ತೆಲುಗಿನಲ್ಲಿ 2015ರಲ್ಲಿ ತೆರೆಕಂಡ ‘ಚಂದ್ರಿಕಾ’ ಚಿತ್ರದಲ್ಲಿ ಶ್ರೀಮುಖಿ ಜೆ.ಕೆ. ಜತೆಗೆ ತೆರೆಹಂಚಿಕೊಂಡಿದ್ದರು. 

ತೆಲುಗಿನ ‘ನೇನು ಸೈಲಾಜಾ’, ‘ಬಾಬು ಬಾಗ ಬ್ಯುಸಿ’, ‘ಲೈಫ್ ಈಸ್ ಬ್ಯೂಟಿಫುಲ್’, ‘ಜಂಟಲ್ಮನ್’, ‘ಸಾವಿತ್ರಿ’, ‘ಮನಲೋ ಒಕ್ಕಡು’ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ತೆರೆಕಂಡ ‘ಬಾಬು ಬಾಗ ಬ್ಯುಸಿ’ ಚಿತ್ರದ ನಂತರ ಶ್ರೀಮುಖಿ ಮತ್ತೆ ಹಿರಿತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಸದ್ಯ ಜೆಮಿನಿ ಟಿ.ವಿಯ ಸೆಲೆಬ್ರಿಟಿ‌ ಕಬಡ್ಡಿ ಲೀಗ್‌ ನಿರೂಪಣೆಯನ್ನು ಶ್ರೀಮುಖಿ ಮಾಡುತ್ತಿದ್ದಾರೆ. ಮತ್ತೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳಲು ಒಳ್ಳೆಯ ಸ್ಕ್ರಿಪ್ಟ್‌ಗಾಗಿ ಶ್ರೀಮುಖಿ ಕಾಯುತ್ತಿದ್ದಾರಂತೆ. ಈ ಚೆಲುವೆ ಆಗಾಗ ಸೋಷಿಯಲ್‌ ಮೀಡಿಯಾಗಳಲ್ಲಿ ತನ್ನ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಖುಷಿಯಲ್ಲಿಟ್ಟಿದ್ದಾರೆ. ಜತೆಗೆ ಸುದ್ದಿಯಲ್ಲೂ ಇದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು