ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

51ನೇ ವಯಸ್ಸಿಗೆ ಗಂಡು ಮಗುವಿಗೆ ತಂದೆಯಾದ ತೆಲುಗು ನಿರ್ಮಾಪಕ ದಿಲ್‌ರಾಜು

ಅಕ್ಷರ ಗಾತ್ರ

ಹೈದರಾಬಾದ್: ತೆಲುಗಿನ ಖ್ಯಾತ ನಿರ್ಮಾಪಕ ದಿಲ್‌ರಾಜು ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ದಿಲ್‌ರಾಜು ಅವರ ಪತ್ನಿ ತೇಜಸ್ವಿನಿ ಇಂದು (ಬುಧವಾರ) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

51ನೇ ವಯಸ್ಸಿಗೆ ನಿರ್ಮಾಪಕ ದಿಲ್‌ರಾಜು ಗಂಡು ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ. ಎರಡು ವರ್ಷದ ಹಿಂದಷ್ಟೇ, ತೇಜಸ್ವಿನಿ ಅವರನ್ನು ದಿಲ್‌ರಾಜು ಮದುವೆಯಾಗಿದ್ದರು.

ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ದಿಲ್‌ರಾಜು ಅವರ ಮೊದಲ ಪತ್ನಿ ಅನಿತಾ 2017ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. 2020ರ ಲಾಕ್‌ಡೌನ್‌ ಸಂದರ್ಭದಲ್ಲಿ ದಿಲ್‌ರಾಜು, ತೇಜಸ್ವಿನಿ ಅವರನ್ನು ಎರಡನೇ ಮದುವೆಯಾಗಿದ್ದರು.

51ನೇ ವರ್ಷದಲ್ಲಿ ದಿಲ್‌ರಾಜು ತಂದೆಯಾಗಿರುವುದಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದಾರೆ.

ದಿಲ್‌ರಾಜು ಅವರು ಮೊದಲ ಪತ್ನಿಯ ಪುತ್ರಿ ಹಂಶಿತಾ ರೆಡ್ಡಿ ಒತ್ತಾಯದ ಮೇರೆಗೆ ಎರಡನೇ ಮದುವೆಯಾಗಿದ್ದರು.

ದಿಲ್‌ರಾಜು ಅವರು ಸುಮಾರು 40ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ‘ದಿಲ್‌’, ‘ಆರ್ಯಾ’, ‘ಭದ್ರ’, ‘ಬೊಮ್ಮರಿಲ್ಲು’, ‘ಪೋಕಿರಿ’, ‘ಆರ್ಯಾ–2’, ‘ಫಿದಾ’, ‘ಡಾರ್ಲಿಂಗ್‌’ ‘ರಾಜ ದಿ ಗ್ರೇಟ್’, ‘ಎಫ್–2’ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT