ಬೆಂಗಳೂರು: ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅವರ 69ನೇ ಸಿನಿಮಾ ‘ದಳಪತಿ 69’ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.
ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ ತಮಿಳಿನ ಮೊದಲ ಸಿನಿಮಾ ಇದಾಗಿದ್ದು, ವಿಜಯ್ ರಾಜಕೀಯ ಜೀವನಕ್ಕೆ ಹತ್ತಿರವಿರುವ ಕಥೆಯನ್ನು ಹೊಂದಿದೆ ಎಂಬುದನ್ನು ಪೋಸ್ಟರ್‌ನಲ್ಲಿ ಕಾಣಬಹುದಾಗಿದೆ.
ಪೋಸ್ಟರ್‌ನಲ್ಲಿ ಜ್ಯೋತಿ ಹಿಡಿದಿರುವ ಕೈಯನ್ನು ಕಾಣಬಹುದಾಗಿದೆ. ಅದರೊಂದಿಗೆ ‘ಪ್ರಜಾಪ್ರಭುತ್ವದ ಜ್ಯೋತಿ ಬೆಳಗುವವರು ಶೀಘ್ರದಲ್ಲೇ ನಿಮ್ಮ ಮುಂದೆ’ ಎಂದು ಬರೆಯಲಾಗಿದೆ.