ಬ್ರೇಕಪ್ ಪಾರ್ಟಿಗೆ ಹೋಗುವ ನಾಲ್ವರು ಸ್ನೇಹಿತರು ಒಂದು ಚದುರಂಗದಾಟದ ಬಲೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಆಗ ಅವರ ನಡುವೆ ಶುರುವಾದ ಆಟ ಅವರೊಡನೇ ಆಡಲು ಶುರು ಮಾಡುತ್ತದೆ. ಇದರಿಂದ ಸ್ನೇಹ ಕ್ಷೀಣಿಸಿ, ಸ್ವಾರ್ಥ ಬೆಳೆಯುತ್ತದೆ.ಇದೆಲ್ಲವೂ ಒಂದು ಬಲೆಯಂತೆ ಕಂಡರೆ, ಅದನ್ನು ಭೇದಿಸಿ ಹೊರಬರಲು ಆ ನಾಲ್ವರು ನಡೆಸುವ ಪ್ರಯತ್ನವೇ ‘ದ ಚೆಕ್‌ಮೇಟ್’ ಚಿತ್ರದ ಹೂರಣ.

‘ಈ ಚಿತ್ರವನ್ನುಒಂದು ನಿರ್ದಿಷ್ಟ ಜಾನರ್‌ಗೆ ಸೀಮಿತಗೊಳಿಸಲಾಗದು’ ಎನ್ನುತ್ತಲೇ ಸುದ್ದಿಗೋಷ್ಠಿಯಲ್ಲಿ ಮಾತಿಗೆ ಆರಂಭಿಸಿದ ಚಿತ್ರದ ನಾಯಕ ಮತ್ತು ನಿರ್ಮಾಪಕ ರಂಜನ್ ಹಾಸನ್, ‘ಇದರಲ್ಲಿ ಎಲ್ಲಾ ಜಾನರ್‌ಗಳ ಮಿಶ್ರಣವಿದೆ. ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್, ಪ್ರೇಮಕಥೆಯೂ ಇದೆ. ಇದು ಸಂಪೂರ್ಣ ಮನರಂಜನಾ ಚಿತ್ರ.ಸಿನಿಮಾ ಅಚ್ಚುಕಟ್ಟಾಗಿ ಬಂದಿದೆ.ಸೆನ್ಸಾರ್ ಹಂತದಲ್ಲಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಚಿತ್ರ ಕೈಗೆತ್ತಿಕೊಂಡಿದ್ದೆವು. ಯೋಜನೆ ಪ್ರಕಾರ ಚಿತ್ರೀಕರಣಮುಗಿದಿದೆ. ಆಡಿಯೋ, ಟ್ರೇಲರ್ ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು’ಎಂದರು.

‘ನಿರ್ದೇಶಕ ಭಾರತೀಶ ವಸಿಷ್ಠ ಕಥೆ ಹೇಳಿದಾಗಲೇ ಯಾರೆಲ್ಲ ಕಲಾವಿದರು ಪಾತ್ರಗಳಿಗೆ ಸೂಕ್ತ ಎನ್ನುವುದನ್ನೂ ಮನಸಿನಲ್ಲೇ ನಿರ್ಧರಿಸಿದ್ದೆ.ಒಳ್ಳೆಯ ಸಿನಿಮಾ ಮಾಡಿದ ಆತ್ಮತೃಪ್ತಿ ಸಿಕ್ಕಿದೆ’ ಎನ್ನುವ ಮಾತು ಸೇರಿಸಿದರು ಅವರು.

‘ಇದು ನನಗೆ ಮೊದಲ ಚಿತ್ರ. ಕಿರುಚಿತ್ರಗಳನ್ನು ಮಾಡಿದ ಅನುಭವ ಮಾತ್ರ ಇತ್ತು. ಈ ಚಿತ್ರವನ್ನು ಕ್ರೌಡ್ ಫಂಡಿಂಗ್‌ನಿಂದ ಮಾಡಲುಹೊರಟಿದ್ದೆವು. ರಂಜನ್ ಚಿತ್ರ ನಿರ್ಮಿಸಲು ಒಪ್ಪಿಗೆ ನೀಡಿದಾಗ,ಕ್ರೌಡ್ ಫಂಡ್ ಅನ್ನು ಸಂಬಂಧಿಸಿದವರಿಗೆ ಮರಳಿಸಿದೆವು’ ಎಂದರು ನಿರ್ದೇಶಕಭಾರತೀಶ ವಸಿಷ್ಠ.

ಚಿತ್ರದ ಮತ್ತೊಬ್ಬ ನಿರ್ದೇಶಕ ಸಂತೋಷ್ ಚಿಪ್ಪಾಡಿ, ‘ಈ ಚಿತ್ರದಲ್ಲಿ ಹೊಸತನ್ನು ನೋಡಿದ ಖುಷಿ ಪ್ರೇಕ್ಷಕರಿಗೆ ಸಿಗಲಿದೆ’ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದ ನಾಯಕಿ ಪ್ರೀತು ಪೂಜಾ ‘ಚಿತ್ರದಲ್ಲಿ ನನ್ನದು ಮೂಕಿ ಪಾತ್ರ. ಲವ್ ಮತ್ತು ಕಾಮಿಡಿ ಜತೆಗೆ ನಡೆಯುವ ಕ್ಯೂಟ್ ಲವ್ ಸ್ಟೋರಿ ಇದರಲ್ಲಿದೆ’ ಎಂದರು.

‘ರಿವೀಲ್ ಮಾಡಲಾಗದ ಪಾತ್ರ ನನ್ನದು. ಪೋಸ್ಟರ್‌ನಲ್ಲಿ ನೋಡುವುದಕ್ಕಿಂತಲೂ ಸಿನಿಮಾದೊಳಗೆ ನನ್ನ ಪಾತ್ರ ಬೇರೆಯೇ ಇದೆ ’ ಎಂದು ಕುತೂಹಲ ಕಾಯ್ದುಕೊಂಡರು ನಟ ಸರ್ದಾರ್ ಸತ್ಯ.

ಛಾಯಾಗ್ರಹಣ ಸತೀಶ್ ರಾಜೇಂದ್ರನ್, ಸಂಕಲನ ಈ.ಎಸ್. ಈಶ್ವರ್ ಮತ್ತು ಸುನೀಲ್ ಕಶ್ಯಪ್, ಸಾಹಸ ವೈಲೆಂಟ್ ವೇಲು ಅವರದ್ದು. ತಾರಾಗಣದಲ್ಲಿ ವಿಜಯ್ ಚೆಂಡೂರ್, ಸುಧೀರ್ ಕಾಕ್ರೋಚ್, ಪ್ರದೀಪ್ ಪೂಜಾರಿ, ನಿನಾಸಂ ಅಶ್ವತ್, ರಾಜಶೇಖರ, ವಿಸ್ಮಯ, ಸ್ತುತಿ, ಅಮೃತ ನಾಯರ್, ದಿವ್ಯಾ, ಕಾರ್ತಿಕ್ ಹುಲಿ, ಚಿಲ್ಲರ್ ಮಂಜು, ವಿಶ್ವ ವಿಜೇತ್ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.