ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Teaser | The Sabarmati Report: ಗೋಧ್ರಾ ರೈಲು ಹತ್ಯಾಕಾಂಡ ಆಧರಿಸಿದ ಚಿತ್ರ

Published 28 ಫೆಬ್ರುವರಿ 2024, 10:32 IST
Last Updated 28 ಫೆಬ್ರುವರಿ 2024, 10:32 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ನಡೆದ ಕಹಿ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಟ್ರೆಂಡ್‌ ಈಗಾಗಲೇ ಆರಂಭವಾಗಿದೆ. ಇದೀಗ ಗುಜರಾತ್‌ನ ಗೋಧ್ರಾ ರೈಲು ಹತ್ಯಾಕಾಂಡ ಆಧರಿಸಿ ಸಿನಿಮಾವೊಂದು ತಯಾರಾಗಿದೆ.

ಈ ಚಿತ್ರಕ್ಕೆ ‘ದಿ ಸಾಬರಮತಿ ರಿಪೋರ್ಟ್​’ (The Sabarmati Report) ಎಂದು ಹೆಸರಿಡಲಾಗಿದೆ. ಇದರ ಟೀಸರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. 

ಮುಖ್ಯ ಪಾತ್ರದಲ್ಲಿ ನಟ ವಿಕ್ರಾಂತ್​ ಮಾಸ್ಸಿ ನಟಿಸಿದ್ದಾರೆ. ರಾಶಿ ಖನ್ನಾ, ರಿಧಿ ಡೋಗ್ರಾ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಮೇ 3ರಂದು ದೇಶದಾದ್ಯಂತ ಬಿಡುಗಡೆಯಾಗಲಿದೆ.

ಗೋದ್ರಾ ಹತ್ಯಾಕಾಂಡದ ಕುರಿತು ಸುದ್ದಿ ವಾಚನ ಮಾಡುವ ಪತ್ರಕರ್ತನ ಪಾತ್ರದಲ್ಲಿ ವಿಕ್ರಾಂತ್​ ಮಾಸ್ಸಿ ಅವರು ಕಾಣಿಸಿಕೊಂಡಿರುವುದನ್ನು ಟೀಸರ್‌ನಲ್ಲಿ ಗಮನಿಸಬಹುದು.

ಸಿನಿಮಾವನ್ನು ಬಾಲಾಜಿ ಮೋಷನ್​ ಪಿಕ್ಚರ್ಸ್​ ಹಾಗೂ ವಿಕಿರ್​ ಪ್ರೊಡಕ್ಷನ್​ ಜಂಟಿಯಾಗಿ ನಿರ್ಮಾಣ ಮಾಡಿವೆ. ರಂಜನ್​ ಚಂಡೇಲ್​ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT