ಗುರುವಾರ , ಅಕ್ಟೋಬರ್ 1, 2020
27 °C

ಎರಡು ಬಿಗ್‌ ಬಜೆಟ್‌ ಸಿನಿಮಾ ಶೂಟಿಂಗ್‌ ಸದ್ಯದಲ್ಲೇ ಶುರು

. Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ –19 ಕಾರಣಕ್ಕೆ ಸ್ಥಗಿತಗೊಂಡಿದ್ದ ಚಿತ್ರರಂಗದ ಚಟುವಟಿಕೆಗಳು, ದೇಶದಾದ್ಯಂತ ಲಾಕ್‌ಡೌನ್ ನಿರ್ಬಂಧ ಸಡಿಲಿಕೆಯಾಗುತ್ತಿದ್ದಂತೆ ನಿಧಾನವಾಗಿ ಪುನರಾರಂಭವಾಗುತ್ತಿವೆ. ಈಗಾಗಲೇ ಕಿಚ್ಚ ಸುದೀಪ್‌ ಅಭಿನಯದ ‘ಫ್ಯಾಂಟಮ್‌’ ಚಿತ್ರದ ಚಿತ್ರೀಕರಣ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೊದಲ್ಲಿ ನಡೆಯುತ್ತಿದೆ. ಸುಮಾರು 50 ದಿನಗಳ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯಲಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲೂ ಚಿತ್ರೋದ್ಯಮದ ಚಟುವಟಿಕೆಗಳು ಸದ್ಯದಲ್ಲೇ ಪೂರ್ಣ ಪ್ರಮಾಣದಲ್ಲಿ ಶುರುವಾಗುವ ನಿರೀಕ್ಷೆಗಳು ಮೂಡುತ್ತಿವೆ. ಕನ್ನಡದ ಬಿಗ್‌ ಬಜೆಟ್‌ ಸಿನಿಮಾಗಳಾದ ಕೆಜಿಎಫ್‌ 2 ಮತ್ತು ‘ಮದಗಜ’ ಚಿತ್ರಗಳ ಶೂಟಿಂಗ್‌ ಕೂಡ ಇದೇ ತಿಂಗಳಿನಿಂದ ಆರಂಭವಾಗಲಿವೆ.

ಯಶ್‌ ನಾಯಕನಾಗಿರುವ ಮತ್ತು ಪ್ರಶಾಂತ್‌ ನೀಲ್‌ ನಿರ್ದೇಶನದ ‘ಕೆಜಿಎಫ್ ಚಾಪ್ಟರ್-2’ ಬಾಕಿ ಚಿತ್ರೀಕರಣ ಇದೇ 15ರ ನಂತರ ಬೆಂಗಳೂರಿನ ಮಿನರ್ವ ಮಿಲ್‌ ಸೆಟ್‌ನಲ್ಲಿ ನಡೆಯಲಿದೆ. ಶೇ. 90ರಷ್ಟು ಚಿತ್ರೀಕರಣ ಪೂರೈಸಿರುವ ಚಿತ್ರ ತಂಡ ಒಂದೆರಡು ಫೈಟಿಂಗ್ ಮತ್ತು ಸಣ್ಣ ಪುಟ್ಟ ದೃಶ್ಯಗಳ ಚಿತ್ರೀಕರಣ ಬಾಕಿ ಉಳಿಸಿಕೊಂಡಿತ್ತು.

ಇತ್ತೀಚೆಗಷ್ಟೇ ಬಾಲಿವುಡ್‌ ನಟ ಸಂಜಯ್ ದತ್ತ ಹುಟ್ಟು ಹಬ್ಬದ ನಿಮಿತ್ತ ಹೊಸ ಪೋಸ್ಟರ್‌ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಸಂಜು ಈ ಚಿತ್ರದಲ್ಲಿ ಅಧೀರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಇನ್ನು ರೋರಿಂಗ್‌ ಸ್ಟಾರ್‌ ಶ್ರೀಮುರಳಿ ನಾಯಕನಾಗಿರುವ ‘ಮದಗಜ’ ಚಿತ್ರದ ಚಿತ್ರೀಕರಣವು ಇದೇ ತಿಂಗಳಲ್ಲಿ ಶುರುವಾಗಲಿದೆ.  ‘ಮಿನರ್ವ ಮಿಲ್‌ನಲ್ಲಿ ಹಾಕಿರುವ ಸೆಟ್‌ನಲ್ಲಿ ಇದೇ 10ರ ನಂತರ ಚಿತ್ರೀಕರಣ ನಡೆಯಲಿದೆ. 15 ದಿನಗಳ ಶೂಟಿಂಗ್‌ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. 15 ದಿನಗಳ ಬಿಡುವಿನ ನಂತರ ಎರಡನೇ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಆರಂಭಿಸುಲು ನಿರ್ಧರಿಸಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕ ಮಹೇಶ್‌ ಕುಮಾರ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು