ಏಕಾಂಗಿಯಾಗಿ ಕುಳಿತಿರುವ ಕಾಗೆಯೊಂದು ಕೆಕ್ಕರಿಸಿ ನೋಡುವ ಚಿತ್ರಣವಿರುವ ರಾವೆನ್ ಸಿನಿಮಾದ ಪೋಸ್ಟರ್ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.
ಈ ಚಿತ್ರದಲ್ಲಿ ಕಾಗೆಯೇ ನಾಯಕ ನಟ ಎನ್ನುವುದು ವಿಶೇಷ. ಈ ಹಿಂದೆ ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ‘ಯಲ್ಲಿ ನಾಯಿ, ರಾಜ್ ಶೆಟ್ಟಿ ಅವರ ‘ಟೋಬಿ‘ಯಲ್ಲಿ ಮೂಗುತಿ ಹಾಕಿರುವ ಟಗರಿನ ಪೋಸ್ಟರ್ ವೈರಲ್ ಆಗಿದ್ದವು. ಇದೀಗ ಈ ಸಾಲಿಗೆ ರಾವೆನ್ ಸೆರ್ಪಡೆಯಾಗಿದೆ.