ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಮಂದಿರ ಸಂಸ್ಕೃತಿ ನಾಶವಾಗದಿರಲಿ: ವಿ.ರವಿಚಂದ್ರನ್‌

Last Updated 26 ಆಗಸ್ಟ್ 2021, 20:15 IST
ಅಕ್ಷರ ಗಾತ್ರ

‘ದೃಶ್ಯ–2’, ‘ರವಿ ಬೋಪಣ್ಣ’... ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಆದರೆ, ನಮ್ಮ ಚಿತ್ರಗಳ ಬಿಡುಗಡೆಗೆ ಚಿತ್ರಮಂದಿರವೇ ಬೇಕು.ಚಿತ್ರಮಂದಿರಸಂಸ್ಕೃತಿನಾಶವಾಗಬಾರದು.

ಇದು ನಟ ವಿ.ರವಿಚಂದ್ರನ್‌ ಅವರ ಸ್ಪಷ್ಟ ಮಾತು. ‘ದೃಶ್ಯ – 2’ ಚಿತ್ರದ ಕುರಿತ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಹೇಳಿದರು.

‘ಜನರಿಗೆ ಸುಮಾರು 6 ಗಂಟೆಗಳ ಕಾಲ (ಮೂರು ಗಂಟೆ ಚಿತ್ರಮಂದಿರದ ಹೊರಗೆ, ಮೂರು ಗಂಟೆ ಚಿತ್ರ ಮಂದಿರಗಳ ಒಳಗೆ) ಪರಿಪೂರ್ಣ ಮನೋರಂಜನೆ ಅಗ್ಗದ ದರದಲ್ಲಿ ನೀಡುವುದು ಚಿತ್ರಮಂದಿರಗಳ ಸಿನಿಮಾ ಮಾತ್ರ. ಒಟಿಟಿ ಅಲ್ಲ. ಮೊದಲು ಜನರ ಆತಂಕ ನಿವಾರಣೆಯಾಗಬೇಕು’ ಎಂದರು ರವಿಚಂದ್ರನ್‌. ದೃಶ್ಯ–2 ಬಗ್ಗೆ ಮಾತನಾಡಿದನಿರ್ದೇಶಕ ಪಿ.ವಾಸು, ‘ಜುಲೈ 12ರಿಂದಚಿತ್ರೀಕರಣ ಆರಂಭಿಸಿ 38 ದಿನಗಳಲ್ಲಿ ಮುಗಿಸಿದ್ದೇವೆ. ಚಿತ್ರವು ಒಂದಿಷ್ಟು ನವಿರುತನ, ಗಂಭೀರ ಮತ್ತು ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿದೆ’ ಎಂದರು. ನವ್ಯಾ ನಾಯರ್‌ (ಸೀತಾ ಪಾತ್ರ) ಬಗ್ಗೆ ಅಭಿಮಾನದಿಂದ ಮಾತನಾಡಿದ ರವಿಚಂದ್ರನ್‌, ‘ನವ್ಯಾ ಅದ್ಭುತವಾದ ಭರತನಾಟ್ಯ ಕಲಾವಿದೆ. ನಾವೆಲ್ಲರೂ ನಟಿಸುವ ಹಾಗೆ ಮಾಡುವ ಸಾಮರ್ಥ್ಯ ಅವರಲ್ಲಿ ಇದೆ. ಶೂಟಿಂಗ್‌ಗೆ ಬರೋದು ಮಾತ್ರ ಸ್ವಲ್ಪ ಲೇಟು’ ಎಂದು ಮೆಲ್ಲನೆ ಕಾಲೆಳೆದರು.

ನವ್ಯಾ ಮಾತನಾಡಿ, ‘ದೃಶ್ಯ – 2 ಸಿನಿಮಾದಲ್ಲಿ ನಟಿಸುವಾಗ ನಾನು ಬೇರೆ ಭಾಷೆಯವಳು ಎಂದು ಅನಿಸಲೇ ಇಲ್ಲ. ನಾನು ಮಲಯಾಳಂನಲ್ಲೇ ಮಾತನಾಡುತ್ತಿದ್ದೆ. ಚಿತ್ರತಂಡದವರು ಅರ್ಥಮಾಡಿಕೊಂಡು ಸ್ಪಂದಿಸುತ್ತಿದ್ದರು. ಇದೊಂದು ತುಂಬಾ ಭಾವನಾತ್ಮಕ, ಗಂಭೀರ ವಸ್ತು ಉಳ್ಳ ಸಿನಿಮಾ. ಮೊದಲ ಅರ್ಧ ಭಾಗದಲ್ಲಿ ಗಂಡ ಹೆಂಡತಿಯ ನಡುವಿನ ತಮಾಷೆಯನ್ನು ತೋರಿಸುತ್ತದೆ. ನಿರ್ದೇಶಕರು ನಮಗೆ ಮುಕ್ತ ಅವಕಾಶ ನೀಡಿದ್ದಾರೆ. ನಮ್ಮ ಉಚ್ಛಾರ, ಮಾತಿನ ಶೈಲಿ ಮಲಯಾಳಂನದ್ದೇ ಬಂದಾಗಲೂ ಸಾಕಷ್ಟು ಆತ್ಮವಿಶ್ವಾಸ ತುಂಬಿ ಬೆನ್ನುತಟ್ಟಿದ್ದಾರೆ’ ಎಂದರು. ‘ರವಿಚಂದ್ರನ್‌ ಅವರ ‘ಯಮ್ಮ ಯಮ್ಮಾ ನೋಡ್ದೇ ನೋಡ್ದೆ...’, ‘ನವಿಲೇ ನವಿಲೇ ಹಾಡು’ ನನಗೆ ತುಂಬಾ ಇಷ್ಟ. ರವಿಚಂದ್ರನ್‌ ಒಬ್ಬ ತುಂಬಾ ಮಾನವೀಯ ವ್ಯಕ್ತಿ’ ಎಂದು ನವ್ಯಾ ಅಭಿಮಾನದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT