ತೇಜಸ್ವಿನಿಗೆ ರೊಮ್ಯಾನ್ಸ್ ಜೊತೆ ಸ್ವಲ್ಪ ತಮಾಷೆ

ನಟಿ ತೇಜಸ್ವಿನಿ ಶರ್ಮಾ ಈಗ ಸ್ವಲ್ಪ ರೊಮ್ಯಾಂಟಿಕ್ ಹಾಸ್ಯ ಪ್ರಧಾನ ಚಿತ್ರದತ್ತ ವಾಲಿದ್ದಾರೆ. ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ಪ್ರಕಾರದ ಕಥೆಗಳಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಈಗ ಲಘು ಪಾತ್ರಗಳು ಇಷ್ಟವಾಗಿವೆಯಂತೆ. ಅಂದಹಾಗೆ ಈ ಚಿತ್ರದಲ್ಲಿ ತೇಜಸ್ವಿನಿ ಮೇಕಪ್ ಕಲಾವಿದೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ತುಂಬಾ ಬಬ್ಲಿಯಾಗಿರುವ ಪಾತ್ರವಿದು ಎಂದಿದ್ದಾರೆ ಅವರು.
ಲಿಖಿತ್ ಶೆಟ್ಟಿ ನಾಯಕರಾಗಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಡಬೇಕಿದೆ. ಲಿಖಿತ್ ಅವರು ಫ್ಯಾಮಿಲಿ ಪ್ಯಾಕ್, ಸಂಕಷ್ಟಕರ ಗಣಪತಿ ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡವರು. ಈ ಹೊಸ ಚಿತ್ರಕ್ಕೆ ವಿನಾಯಕ ಅವರು ನಿರ್ದೇಶಕರು. ಅವರಿಗೆ ಇದು ಮೊದಲ ಚಿತ್ರ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ತೇಜಸ್ವಿನಿ ಜತೆ ಖುಷಿ ರವಿ ಅವರೂ ತೆರೆ ಹಂಚಿಕೊಂಡಿದ್ದಾರೆ. ಫೆಬ್ರುವರಿಯಿಂದ ಚಿತ್ರೀಕರಣ ನಡೆಯಲಿದೆ. ಮನೋಹರ್ ಜೋಷಿ ಈ ಚಿತ್ರದ ಛಾಯಾಗ್ರಾಹಕರು.
PHOTOS | ರೊಮ್ಯಾಂಟಿಕ್ ಕಾಮಿಡಿಯಲ್ಲಿ ಕ್ಯೂಟ್ ತೇಜಸ್ವಿನಿ
ತೇಜಸ್ವಿನಿ ಅವರು ‘ಸೂಪರ್ ಕಪಲ್’ ವೆಬ್ ಸರಣಿಯ ಮೂಲಕ ಖ್ಯಾತರಾದವರು. ಅಲ್ಲಿಯೂ ತುಂಬಾ ಲಘುವಾಗಿರುವ ಪಾತ್ರ. ಅಲ್ಲಿ ತೊಡಗಿಸಿಕೊಂಡಿರುವುದು ಈ ಚಿತ್ರಕ್ಕೆ ಸಹಾಯಕವಾಯಿತು ಎಂದರು ತೇಜಸ್ವಿನಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.