'ಛೂ ಮಂಥರ್' ಚಿತ್ರದಲ್ಲಿ ಶರಣ್ಗೆ ಜೋಡಿಯಾಗಿದ್ದ ಮೇಘನಾ ಗಾಂವ್ಕರ್ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಗುರುರಾಜ್ ಕುಲಕರ್ಣಿ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿರುವ ಅವರು ತಮ್ಮ ಸಿನಿಪಯಣದ ಕುರಿತು ಮಾತನಾಡಿದ್ದಾರೆ..

'ಗುರುರಾಜ್ ಕುಲಕರ್ಣಿ ಅವರ ಹಿಂದಿನ ಚಿತ್ರ 'ದಿ ಜಡ್ಜ್ಮೆಂಟ್'ನಲ್ಲಿ ನಟಿಸಿದ್ದೆ. ಹೀಗಾಗಿ ಅವರು ತಮ್ಮ ಹೊಸ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ. ಕಥೆಯ ಒಂದೆಳೆಯೊಂದಿಗೆ ನನ್ನ ಪಾತ್ರದ ಬಗ್ಗೆಯಷ್ಟೇ ಹೇಳಿದ್ದಾರೆ. ಪೊಲೀಸ್ ಅಧಿಕಾರಿಯಾಗಿರುತ್ತೇನೆ. ಚಿತ್ರದಲ್ಲಿ ಬಹಳ ಮಹತ್ವ ಹೊಂದಿರುವ ಪಾತ್ರ. ಇದಕ್ಕಿಂತ ಹೆಚ್ಚು ವಿವರ ಈಗಲೇ ನೀಡಲು ಸಾಧ್ಯವಿಲ್ಲ. ಜೂನ್ ಅಂತ್ಯದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ' ಎಂದು ಮಾತು ಪ್ರಾರಂಭಿಸಿದರು ಮೇಘನಾ.

ಖಾಸಗಿ ವಾಹಿನಿಗಳಲ್ಲಿ ನಿರೂಪಕಿಯಾಗಿ ಚಿತ್ರರಂಗ ಪ್ರವೇಶಿಸಿದ ಮೇಘನಾ ಹತ್ತಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಕಾಣಸಿಕೊಂಡಿದ್ದಾರೆ. ಈ ವರ್ಷ ತೆರೆಕಂಡ ಶರಣ್ ಅಭಿನಯದ 'ಛೂ ಮಂಥರ್' ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸೂರತ್ಕಲ್-2' ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿದ್ದರು.

'ಮತ್ತೊಂದು ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಬಗ್ಗೆ ಚಿತ್ರತಂಡದಿಂದಲೇ ಅಧಿಕೃತ ಘೋಷಣೆ ಹೊರಬರಲಿದೆ. ನನಗೆ ಅವಕಾಶಗಳಿಗೆ ಕಡಿಮೆಯಾಗಿಲ್ಲ. ಆದರೆ ನಾನು ಗಟ್ಟಿತನವಿರುವ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ಹತ್ತು ಚಿತ್ರಗಳ ಆಫರ್ ಬಂದರೆ ಅದರಲ್ಲಿ ಎರಡನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ನನಗೆ ಸರಿಹೊಂದುವ ತಂಡಗಳ ಜತೆ ಮಾತ್ರ ಕೆಲಸ ಮಾಡುತ್ತೇನೆ. ಉತ್ತಮ ಸಂಭಾವನೆ ಕೂಡ ಇರಬೇಕು. ಹೀಗಾಗಿ ನನಗೆ ಚಿತ್ರಗಳು ಕಡಿಮೆ. ಈತನಕ ಮಾಡಿದ ಚಿತ್ರಗಳೆಲ್ಲವೂ ಜನಕ್ಕೆ ತಲುಪಿದೆ ಎಂಬ ಖುಷಿಯಿದೆ' ಎಂದರು.

ಹಲವು ಭಾಷೆಗಳಲ್ಲಿ ಸಿನಿಮಾ

ಈ ಹಿಂದೆ ‘ಆಕ್ಸಿಡೆಂಟ್’, ‘ಲಾಸ್ಟ್ ಬಸ್’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಗುರುರಾಜ್ ಬಿ ಕುಲಕರ್ಣಿ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸಿದ್ದು, ಪಾತ್ರವರ್ಗದ ಹುಡುಕಾಟದಲ್ಲಿದ್ದಾರೆ. ತಮ್ಮದೇ ಜಿ9 ಕಮ್ಯೂನಿಕೇಷನ್ ಮೀಡಿಯಾ ಮತ್ತು ಎಂಟರ್ಟೈನ್ಮೆಂಟ್ ಮೂಲಕ ಹೊಸ ಸಿನಿಮಾ ನಿರ್ಮಿಸುತ್ತಿದ್ದಾರೆ.

'ಒಂದು ಕೌಟಂಬಿಕ ಕಥೆ ಹೊಂದಿರುವ ಮನರಂಜನೆ ಚಿತ್ರ. ಕನ್ನಡ ಮಾತ್ರವಲ್ಲದೆ ಚೈನಿಸ್, ಫ್ರೆಂಚ್ ಮೊದಲಾದ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ತಲುಪಿಸುವ ಆಲೋಚನೆಯಿದೆ. ಈ ನಿಟ್ಟಿನಲ್ಲಿ ಕೆಲ ನಿರ್ಮಾಣ ಸಂಸ್ಥೆಗಳ ಜತೆ ಮಾತುಕತೆ ನಡೆಸುತ್ತಿರುವೆ. 'ಜಡ್ಜ್ಮೆಂಟ್' ಚಿತ್ರದ ಬಳಿಕ ಕೆಲವೇ ನಟರು ಈಗಲೂ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಈ ಚಿತ್ರದಲ್ಲಿಯೂ ಇರುತ್ತಾರೆ. ಒಂದು ಹಂತದ ಚಿತ್ರೀಕರಣ ಮುಗಿಸಿ ಚಿತ್ರದ ಶೀರ್ಷಿಕೆ ಘೋಷಿಸುವ ಆಲೋಚನೆಯಿದೆ' ಎನ್ನುತ್ತಾರೆ ಗುರುರಾಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.