ಶನಿವಾರ, ಏಪ್ರಿಲ್ 1, 2023
23 °C

ಮೂರೇ ದಿನಕ್ಕೆ ₹300 ಕೋಟಿ ದಾಟಿದ ‘ಪಠಾಣ್’ ಗಳಿಕೆ: 21 ದಾಖಲೆ ಧೂಳಿಪಟ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮುಖ್ಯ ಭೂಮಿಕೆಯಲ್ಲಿರುವ ಹಿಂದಿಯ ಪಠಾಣ್ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮೂರೇ ದಿನಗಳಲ್ಲಿ ₹313 ಕೋಟಿ ಗಳಿಕೆ ಕಂಡಿದೆ.

ಜನವರಿ 25ರಂದು ತೆರೆ ಕಂಡ ಚಿತ್ರ ಮೂರನೇ ದಿನ ಹಿಂದಿಯಲ್ಲಿ ₹38 ಕೋಟಿ ನಿವ್ವಳ ಗಳಿಕೆ ಕಂಡಿದೆ. ಇತರೆ ಭಾಷೆಗಳಲ್ಲಿ ₹1.25 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಣ ಮಾಡಿರುವ ಯಶ್‌ ರಾಜ್ ಫಿಲ್ಮ್ಸ್ ತಿಳಿಸಿದೆ.

‘ಮೂರನೇ ದಿನ ಚಿತ್ರವು ಭಾರತದಲ್ಲಿ ₹39.25 ನಿವ್ವಳ ಗಳಿಕೆ (ಒಟ್ಟು ₹47ಕೋಟಿ) ಕಂಡಿದ್ದು, ವಿದೇಶದಲ್ಲಿ ಒಟ್ಟು ₹43 ಕೋಟಿ ಗಳಿಸಿದೆ. ಒಟ್ಟಾರೆ ವಿಶ್ವದಾದ್ಯಂತ ಮೂರನೇ ದಿನದ ಗಳಿಕೆ ₹90 ಕೋಟಿ ಆಗಿದೆ’ ಎಂದು ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

4 ವರ್ಷಗಳ ದೀರ್ಘ ವಿರಾಮದ ಬಳಿಕ ತೆರೆ ಕಂಡಿರುವ ಶಾರುಖ್ ಖಾನ್ ಅವರ ಚಿತ್ರ ಮೊದಲ ದಿನವೇ ವಿಶ್ವದಾದ್ಯಂತ ₹106 ಕೋಟಿ ಗಳಿಸಿತ್ತು. ಎರಡನೇ ದಿನ ₹113.6 ಕೋಟಿ ಮತ್ತು ಮೂರನೇ ದಿನ ₹90 ಕೋಟಿ ಗಳಿಸಿದೆ.

ಮೂರು ದಿನಗಳ ಬಳಿಕ ಚಿತ್ರ ಭಾರತದಲ್ಲಿ ₹201 ಕೋಟಿ ಮತ್ತು ವಿದೇಶದಲ್ಲಿ ₹112 ಕೊಟಿ ಗಳಿಕೆ ಕಂಡಿದೆ.

ಪಠಾಣ್ ಚಿತ್ರವು ಮೊದಲ ದಿನ ಭಾರತ ಮತ್ತು ವಿದೇಶದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

‘ಪಠಾಣ್ ಚಿತ್ರವನ್ನು ವಿಶ್ವದಾದ್ಯಂತ ಇರುವ ಭಾರತೀಯರು ಆಶೀರ್ವದಿಸಿದ್ದಾರೆ. ಚಿತ್ರ ಮುನ್ನುಗ್ಗುತ್ತಿರುವ ಪರಿ ಅಭೂತಪೂರ್ವ ಮತ್ತು ಐತಿಹಾಸಿಕವಾದದ್ದು’ಎಂದು ಯಶ್ ರಾಜ್ ಫಿಲ್ಮ್ಸ್ ಸಿಇಒ ಅಕ್ಷಯೆ ವಿಧಾನಿ ಹೇಳಿದ್ದಾರೆ.

ಯಶ್ ರಾಜ್ ಫಿಲ್ಮ್ಸ್ ಪ್ರಕಾರ, ಪಠಾಣ್ ಚಿತ್ರವು 21 ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು