ಶ್ರೀಭರತ ಬಾಹುಬಲಿ

ಐಶ್ವರ್ಯ ಫಿಲಂ ಪ್ರೊಡಕ್ಷನ್ಸ್ ಲಾಂಛನದಡಿ ಶಿವಪ್ರಕಾಶ್ ಟಿ. ನಿರ್ಮಿಸಿರುವ ‘ಶ್ರೀಭರತ ಬಾಹುಬಲಿ’ ಸಿನಿಮಾ ಬಿಡುಗಡೆಯಾಗುತ್ತಿದೆ.

ಮಂಜು ಮಾಂಡವ್ಯ ಈ ಚಿತ್ರ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತ ರಚನೆಯ ನೊಗವನ್ನೂ ಅವರೇ ಹೊತ್ತಿದ್ದಾರೆ. ಜೊತೆಗೆ, ನಾಯಕನಾಗಿಯೂ ನಟಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಪರ್ವೆಜ್ ಅವರ ಛಾಯಾಗ್ರಹಣವಿದೆ. ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ. ಕಲೈ, ಮುರಳಿ ನೃತ್ಯ ನಿರ್ದೇಶಿಸಿದ್ದಾರೆ. ಮಲ್ಲ, ಶಿವಕುಮಾರ್, ಅರುಣ್ ಸಾಗರ್ ಅವರ ಕಲಾ ನಿರ್ದೇಶನವಿದೆ. ಮಾಸ್ ಮಾದ, ಎ. ವಿಜಯ್ ಮತ್ತು ವಿನೋದ್ ಸಾಹಸ ನಿರ್ದೇಶಿಸಿದ್ದಾರೆ.

ಚಿಕ್ಕಣ್ಣ, ಶ್ರೇಯಾ ಶೆಟ್ಟಿ, ಸಾರಾ ಹರೀಶ್, ಶ್ರುತಿ ಪ್ರಕಾಶ್, ಶ್ರೀನಿವಾಸಮೂರ್ತಿ, ಭವ್ಯಾ, ಅಚ್ಯುತರಾವ್, ಹರೀಶ್ ರಾಯ್, ಜಾನ್ ಕೊಕೇನ್, ಅಯ್ಯಪ್ಪ ಪಿ. ಶರ್ಮ, ಕರಿಸುಬ್ಬು, ಪುಷ್ಪಸ್ವಾಮಿ ತಾರಾಗಣದಲ್ಲಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ರಿಷಿ ಹಾಗೂ ಹಿರಿಯ ನಟ ಚರಣ್‍ರಾಜ್ ಅವರ ಪುತ್ರ ತೇಜ್‍ರಾಜ್ ಅಭಿನಯಿಸಿದ್ದಾರೆ.

ಜನ್‍ಧನ್

ಶ್ರೀಸಿದ್ಧಿವಿನಾಯಕ ಫಿಲಂಸ್ ಲಾಂಛನದಡಿ ಟಿ. ನಾಗಚಂದ್ರ ಮತ್ತು ಅವರ ಸ್ನೇಹಿತರು ನಿರ್ಮಿಸುತ್ತಿರುವ ‘ಜನ್‍ಧನ್’ ಚಿತ್ರ ತೆರೆ ಕಾಣುತ್ತಿದೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ.

ಬೆಂಗಳೂರಿನಿಂದ -ಶಿರಾವರೆಗೂ ನಡೆಯುವ ಒಂದು ದಿನದ ಕಥೆ ಇದು. ಎನ್.ಎಚ್. 4ನಲ್ಲಿ ಬೆಳಿಗ್ಗೆ 4 ಗಂಟೆಯಿಂದ ಪ್ರಾರಂಭವಾದರೆ ಸಂಜೆಗೆ ಕೊನೆಗೊಳ್ಳುತ್ತದೆ. ಟಿ. ನಾಗಚಂದ್ರ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅವರೇ ನಿಭಾಯಿಸಿದ್ದಾರೆ.

ಛಾಯಾಗ್ರಹಣ ಉಮೇಶ್ ಕಂಪ್ಲಾಪುರ್ ಅವರದು. ಟಾಪ್ ಸ್ಟಾರ್ ರೇಣು ಸಂಗೀತ ಸಂಯೋಜಿಸಿದ್ದಾರೆ. ಹಿನ್ನೆಲೆ ಸಂಗೀತ ಗೌತಮ್ ಶ್ರೀವತ್ಸ ಅವರದು. ಸುನೀಲ್ ಶಶಿ, ರಚನಾ, ಮಾಸ್ಟರ್ ಲಕ್ಷ್ಮಣ್, ಅರುಣ್, ಟಾಪ್‍ಸ್ಟಾರ್ ರೇಣು, ಜಯಲಕ್ಷ್ಮಿ, ಸುನಿಲ್ ವಿನಾಯಕ, ಸುಮನ್, ತೇಜೇಶ್ವರ್ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.