ತೆಲುಗಿನ ಗೋಪಿಚಂದ್‌ಗೆ ಗಾಯ: ಚಿಕಿತ್ಸೆ ಪಡೆದು ಶೂಟಿಂಗ್‌ಗೆ ಮರಳಿದ ನಟ

ಹೈದರಾಬಾದ್: ತೆಲುಗಿನ ಆ್ಯಕ್ಷನ್ ನಟ ಗೋಪಿಚಂದ್ ಅವರಿಗೆ ಚಿತ್ರೀಕರಣ ಸಮಯದಲ್ಲಿ ಗಾಯವಾಗಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿತ್ತು. ಚಿತ್ರೀಕರಣ ಸಮಯದಲ್ಲಿ ಗೋಪಿಚಂದ್ ಕಾಲು ಜಾರಿ ಕೆಳಗೆ ಬಿದಿದ್ದಾರೆ. ಅವರಿಗೆ ಗಾಯವಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಚಿತ್ರದ ನಿರ್ದೇಶಕ ಶ್ರೀವಾಸ್ ಒಲೆಟ್ಟಿ ತಿಳಿಸಿದ್ದಾರೆ.
‘ಗೋಪಿಚಂದ್ ಅವರಿಗೆ ಸಣ್ಣ ಗಾಯವಾಗಿತ್ತು. ಚಿಕಿತ್ಸೆ ಪಡೆದು ಅವರು ಎರಡು ದಿನ ವಿರಾಮ ತೆಗೆದುಕೊಂಡಿದ್ದಾರೆ. ಇದೀಗ ಶೂಟಿಂಗ್‌ಗೆ ಮರಳಿದ್ದು, ಅಭಿಮಾನಿಗಳು ಗಾಬರಿಪಡುವ ಅವಶ್ಯಕತೆ ಇಲ್ಲ ಎಂದು ಶ್ರೀವಾಸ್ ಹೇಳಿದ್ದಾರೆ.
ಇದನ್ನೂ ಓದಿ: KGF ಚಾಪ್ಟರ್ 2: ತಮಿಳುನಾಡಿನಲ್ಲಿ ₹100 ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ
ಏಪ್ರಿಲ್ 29ರಂದು ಗೋಪಿಚಂದ್‌ಗೆ ಗಾಯವಾಗಿತ್ತು. ನಂತರ ಎರಡು ದಿನ ಶೂಟಿಂಗ್ ನಿಲ್ಲಿಸಲಾಗಿತ್ತು. ಈಗ ಮತ್ತೆ ಚಿತ್ರೀಕರಣ ಆರಂಭವಾಗಿದೆ ಎಂದು ಚಿತ್ರತಂಡ ಖಚಿತಪಡಿಸಿದೆ.
ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಭೇಟಿ ಮಾಡಿದ ಕಂಗನಾ: 'ಮಹಾರಾಜ್’ ಎಂದು ಬಣ್ಣನೆ
ಗೋಪಿಚಂದ್ ಅವರ ‘ಪಕ್ಕಾ ಕಮರ್ಶಿಯಲ್‘ ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.