ಮುಂಬೈ:ನಟಿ ಪೂಜಾ ಹೆಗ್ಡೆ ಟಾಲಿವುಡ್ನಲ್ಲಿ ಮಾತ್ರವಲ್ಲದೇ ಬಾಲಿವುಡ್ನಲ್ಲೂ ಮಿಂಚುತ್ತಿರುವಪ್ರತಿಭಾನ್ವಿತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪೂಜಾ ನಟಿಸಿದ್ದ‘ಅಲಾ ವೈಕುಂಠಪುರಮುಲೋ’ ಚಿತ್ರ ಭರ್ಜರಿ ಯಶಸ್ಸು ಕಂಡಿದೆ.

ಪೂಜಾಹೆಗ್ಡೆಗೆ ಸಾಲು ಸಾಲು ಅವಕಾಶಗಳು ಬರುತ್ತಿರುವುದು ಅವರ ದೈಹಿಕ ಮೈಮಾಟ ಮತ್ತು ಪ್ರಬುದ್ದ ನಟನೆಯಿಂದ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಪೂಜಾ ಅವರ ಜಿರೋ ಸೈಜಿನ ಹಿಂದಿರುವ ರಹಸ್ಯವೇ ಜಿಮ್ನಲ್ಲಿ ವರ್ಕೌಟ್ ಮಾಡುವುದು. ಹೌದು ಪೂಜಾ ಬಿಡುವು ದೊರೆತಾಗ ಜಿಮ್ನಲ್ಲಿ ಬೆವರು ಹರಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅವರು ವರ್ಕೌಟಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪದೇ ಪದೇ ಹಂಚಿಕೊಳ್ಳುತ್ತಾರೆ. ಆ ಮೂಲಕ ಅಭಿಮಾನಿಗಳಿಗೂ ಜಿಮ್ನಲ್ಲಿ ಬೆವರು ಹರಿಸುವಂತೆ ಪ್ರೇರಪಿಸುತ್ತಾರೆ.

ಇತ್ತೀಚೆಗೆ ಪೂಜಾ ಹೆಗ್ಡೆ ವರ್ಕೌಟ್ ಮಾಡುತ್ತಿರುವ ಪೋಸ್ಟ್ವೊಂದನ್ನುಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಅದು ಸಾಕಷ್ಟು ವೈರಲ್ ಆಗಿದೆ. ತಮ್ಮಕಾಲುಗಳನ್ನು ಚಾಚಿ ವರ್ಕೌಟ್ ಮಾಡುತ್ತಿರುವುದಕ್ಕೆ ಅಭಿಮಾನಿಗಳ ಫಿದಾ ಆಗಿದ್ದಾರೆ. ಈ ರೀತಿಯ ವರ್ಕೌಟ್ ಮಾಡುವುದು ಕಷ್ಟ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತನ್ನ ಪ್ರತಿಭೆ ತೋರಿಸುವಲ್ಲಿ ಈ ಕನ್ನಡತಿ ಹಿಂದೆ ಬಿದ್ದಿಲ್ಲ. ಆಕೆಯ ಬತ್ತಳಿಕೆಯಲ್ಲಿ ಹಲವು ಬಿಗ್ ಬಜೆಟ್ ಸಿನಿಮಾಗಳಿರುವುದು ಎಲ್ಲರಿಗೂ ತಿಳಿದಿದೆ. ತನಗೆ ಸಿಕ್ಕಿದ ಪಾತ್ರಗಳಿಗೆ ನ್ಯಾಯ ಒದಗಿಸುವುದರಲ್ಲೂ ಆಕೆ ಒಂದು ಹೆಜ್ಜೆ ಮುಂದಿದ್ದಾಳೆ. ಈ ನಿಟ್ಟಿನಲ್ಲಿ ವರ್ಕೌಟ್ ಮಾಡಿ ಎಂತಹ ಪಾತ್ರಗಳನ್ನು ಕೊಟ್ಟರೂ ನ್ಯಾಯ ಒದಗಿಸ ಬಲ್ಲೆ ಎನ್ನುತ್ತಾರೆ. ಈ ಹಿಂದೆ ಅವರು ತೆಲುಗು ಸಿನಿಮಾಗಾಗಿ ಬಾಕ್ಸಿಂಗ್ ಕಲಿತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.