ಚಿತ್ರದ ನಾಯಕಿ ಯಾರೆಂಬ ಬಗ್ಗೆ ಚಿತ್ರತಂಡ ಇದುವರೆಗೆ ಮಾಹಿತಿ ಹಂಚಿಕೊಂಡಿಲ್ಲ. ಕಿಯಾರಾ ಅಡ್ವಾಣಿ, ನಯನತಾರಾ ಹೆಸರುಗಳು ಮುನ್ನೆಲೆಗೆ ಬಂದಿವೆಯಾದರೂ ಖಚಿತವಾಗಿಲ್ಲ.
ಚಿತ್ರದಲ್ಲಿ ಯಶ್ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ತಮ್ಮ ಲುಕ್ ಅನ್ನು ಸಂಪೂರ್ಣ ಬದಲಾಯಿಸಿಕೊಂಡಿದ್ದಾರೆ. ಕೆಜಿಎಫ್‌ನ ರಾಕಿ ಬಾಯ್ ಲುಕ್ ಅನ್ನು ಮೆಚ್ಚಿದ್ದ ಅಭಿಮಾನಿಗಳು, ಟಾಕ್ಸಿಕ್‌ನಲ್ಲಿ ನೆಚ್ಚಿನ ನಟನ ಲುಕ್ ನೋಡಲು ಕಾತರಾಗಿದ್ದಾರೆ.
ಚಿತ್ರತಂಡವೇ ಹೇಳಿರುವ ಹಾಗೆ 'ಟಾಕ್ಸಿಕ್’ ಮುಂದಿನ ವರ್ಷದ ಏಪ್ರಿಲ್ 10ಕ್ಕೆ ಬಿಡುಗಡೆಯಾಗಲಿದೆ. ಕನ್ನಡ, ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಚಿತ್ರ ತೆರೆಕಾಣಲಿದೆ.