ಶನಿವಾರ, ಜುಲೈ 31, 2021
23 °C

'ಸಾರಾ ವಜ್ರ' ಚಿತ್ರದ ಟ್ರೇಲರ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಹಿತಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ ಆಧಾರಿತ 'ಸಾರಾ ವಜ್ರ' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಹಂಸಲೇಖ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ನಡೆಯುತ್ತಿದೆ.

ಜೂನ್‌ 30ರಂದು ಸಾರಾ ಅಬೂಬಕ್ಕರ್ ತಮ್ಮ 85ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ‘ಸಾರಾ ವಜ್ರ’ ಚಿತ್ರತಂಡ ಲಹರಿ ಮ್ಯೂಸಿಕ್ ಮೂಲಕ ಟ್ರೇಲರ್ ಬಿಡುಗಡೆ ಮಾಡಿದೆ.

ಆರ್ನಾ ಸಾಧ್ಯಾ ನಿರ್ದೇಶನದ ಈ ಚಿತ್ರದ ಟ್ರೇಲರ್ ಬಗ್ಗೆ ನಟಿ ಪ್ರಿಯಾಂಕ ಉಪೇಂದ್ರ, ರೂಪಾ ಅಯ್ಯರ್, ನಿರ್ದೇಶಕ ಕೆ.ಎಂ.ಚೈತನ್ಯ ಸೇರಿ ಹಲವು ಗಣ್ಯರು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಅನು ಪ್ರಭಾಕರ್ ನಾಯಕಿಯಾಗಿ ನಟಿಸಿರುವ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರೆಹಮಾನ್ ಹಾಸನ್, ರಮೇಶ್ ಭಟ್, ಶಂಖನಾದ ಅರವಿಂದ್, ಸುಧಾ ಬೆಳವಾಡಿ, ರಾಮಸ್ವಾಮಿ, ಪ್ರದೀಪ್ ಪೂಜಾರಿ, ವಿಭಾಸ್, ಸಾಯಿತೋಷಿತ್, ಅಂಕಿತಾ, ಆಯುಷ್ ಜಿ. ಶೆಟ್ಟಿ ಬಣ್ಣ ಹಚ್ಚಿದ್ದಾರೆ.

ಸಂಭ್ರಮ ಡ್ರೀಮ್ ಹೌಸ್ ಅರ್ಪಿಸುವ ಈ ಚಿತ್ರಕ್ಕೆ ಸಂಭ್ರಮ ಡ್ರೀಮ್ ಹೌಸ್ ಮತ್ತು ದೇವೇಂದ್ರ ರೆಡ್ಡಿ ಬಂಡವಾಳ ಹೂಡಿದ್ದಾರೆ. ಪರಮೇಶ್ ಸಿ.ಎಂ ಛಾಯಾಗ್ರಹಣ, ವಿ.ಮನೋಹರ್ ಸಂಗೀತ ನಿರ್ದೇಶನ ಹಾಗೂ ಅಕ್ಷಯ್ ಪಿ.ರಾವ್ ಅವರ ಸಂಕಲನವಿದೆ. ಈ ಚಿತ್ರಕ್ಕೆ  ಬಿ.ಎಂ. ಹನೀಫ್ ಹಾಡುಗಳನ್ನು ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು