ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೈಲರ್‌ ನೋಡಿ: ಕಲ್ಯಾಣ್ ದೇವ್‌–ರಚಿತಾ ರಾಮ್‌ ಕೆಮಿಸ್ಟ್ರಿ ‘ಸೂಪರ್​ ಮಚ್ಚಿ’ 

Last Updated 12 ಜನವರಿ 2022, 10:08 IST
ಅಕ್ಷರ ಗಾತ್ರ

ಕನ್ನಡತಿ ರಚಿತಾ ರಾಮ್ ಅಭಿನಯದ ತೆಲುಗಿನ ‘ಸೂಪರ್​ ಮಚ್ಚಿ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ನಟ ಕಲ್ಯಾಣ್​ ದೇವ್​ ಜತೆತೆರೆ ಹಂಚಿಕೊಂಡಿರುವ ಅವರು ಮೊದಲ ಸಲತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಕನ್ನಡದಲ್ಲಿಬೇಡಿಕೆ ಇದ್ದರೂ ರಚಿತಾಪರಭಾಷೆಯ ಚಿತ್ರರಂಗದತ್ತಲೂ ಕಣ್ಣಿಟ್ಟಿದ್ದಾರೆ

ಯೂಟ್ಯೂಬ್​ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಚಿತ್ರದ ಟ್ರೇಲರ್​ ಲಕ್ಷಾಂತರ ವೀಕ್ಷಣೆ ಕಂಡಿದೆ.ಅಭಿಮಾನಿಗಳು ಕೂಡ ಉತ್ತಮ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ಕೊರೊನಾ ನಡುವೆಯೂ ‘ಸೂಪರ್​ ಮಚ್ಚಿ’ ಚಿತ್ರ ಜನವರಿ 24ರಂದು ಬಿಡುಗಡೆಯಾಗುತ್ತಿದೆ. ಪುಲಿ ವಾಸು ನಿರ್ದೇಶನದ ಈ ಸಿನಿಮಾಗೆ ತಮನ್‌ಸಂಗೀತ ನೀಡಿದ್ದಾರೆ.

ಇತ್ತೀಚೆಗಷ್ಟೇ ರಚಿತಾ ನಟನೆಯ ಕನ್ನಡದ ‘ಲವ್​ ಯೂ ರಚ್ಚು’ ಸಿನಿಮಾ ತೆರೆಕಂಡು ಯಶಸ್ವಿಯಾಗಿದೆ. ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಚಿತ್ರದಲ್ಲೂ ರಚಿತಾ ಅಭಿನಯಿಸಿದ್ದು ಈ ಚಿತ್ರ ಬಿಡುಗಡೆ ಸಿದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT