ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತ್ರಿಭುಜ’ ಸಿನಿಮಾ ಡಿ.15ರಂದು ತೆರೆಗೆ

Published 7 ಡಿಸೆಂಬರ್ 2023, 23:30 IST
Last Updated 7 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಮೈಸೂರು: ‘ರಾಗಶ್ರೀ ಫಿಲಂಸ್ ಪ್ರೊಡಕ್ಷನ್‌ ನಿರ್ಮಿಸಿರುವ ‘ತ್ರಿಭುಜ’ ಚಲನಚಿತ್ರ ಡಿ.15ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ’ ಎಂದು ಚಿತ್ರದ ನಿರ್ದೇಶಕ, ಪತ್ರಕರ್ತ ಎಚ್.ವಿ.ಪುಟ್ಟಸ್ವಾಮಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯವನ್ನು ನಾನೇ ಬರೆದಿದ್ದೇನೆ. ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಮೈಸೂರಿನ ಕೃಶ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಕೃತಿಕಾ ಮತ್ತು ಭೂಮಿಕಾ ಎಂಬ ಹೊಸ ನಟಿಯರನ್ನು ಪರಿಚಯಿಸಲಾಗಿದೆ’ ಎಂದರು.

‘ಸಿನಿಮಾವು ಸ್ನೇಹ, ಪ್ರೀತಿ, ಸಂಬಂಧಗಳ ನಡುವೆ ನಡೆಯುವ ತ್ರಿಕೋನ ಕಥೆಯಾಗಿದ್ದು, ಸೆಂಟಿಮೆಂಟ್, ಸಸ್ಪೆನ್ಸ್‌ನಿಂದ ಕೂಡಿದೆ. ನಾಲ್ಕು ಹಾಡುಗಳಿದ್ದು, ಮೈಸೂರಿನ ಅತಿಶಯ್ ಜೈನ್ ಸಂಗೀತ ನೀಡಿದ್ದಾರೆ. ಜಗ್ಗು ಮಾಸ್ಟರ್ ನೃತ್ಯ ಸಂಯೋಜನೆ ಹಾಗೂ ಕೆ.ಎಂ.ದೊಡ್ಡಿಯ ಎ.ಟಿ.ಕೃಷ್ಣ ಅವರ ಛಾಯಾಗ್ರಹಣವಿದೆ’ ಎಂದರು.

‘ತಾರಾಗಣದಲ್ಲಿ ಲಯನ್ ಕೋರಿಯರ್ ವೆಂಕಟೇಶ್, ಲಾಲಿ ಪಾಳ್ಯ ಮಹದೇವು, ಮೀನಕೆರೆ ಆಂಜೀನಪ್ಪ, ಯಶೋದಮ್ಮ, ರಮ್ಮನಹಳ್ಳಿ ಸಿದ್ದು, ಸುರೇಶ್ ಗೋಲ್ಡ್, ಸ್ವಾಮಿಗೌಡ ಅಭಿನಯಿಸಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT