ಭಾನುವಾರ, ಜುಲೈ 25, 2021
21 °C

ನಟ ಶಿಂಬು ಜೊತೆ ತ್ರಿಷಾ ಕೃಷ್ಣನ್‌ ಮದುವೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರರಂಗದಲ್ಲಿ ನಟೀಮಣಿಯರು ಹೀರೊಯಿನ್‌ ಆಗಿ ದೀರ್ಘಕಾಲ ಉಳಿಯುವುದು ನಿಜಕ್ಕೂ ಸವಾಲು. ಆದರೆ, ಈ ಮಾತು ನಟಿ ತ್ರಿಷಾ ಕೃಷ್ಣನ್‌ಗೆ ಅನ್ವಯಿಸುವುದಿಲ್ಲ. ಆಕೆ ಬಣ್ಣದಲೋಕ ಪ್ರವೇಶಿಸಿ ಬರೋಬ್ಬರಿ ಇಪ್ಪತ್ತು ವರ್ಷಗಳು ಉರುಳಿವೆ. ತಮಿಳಿನ ‘ಜೋಡಿ’ ಸಿನಿಮಾದ ಮೂಲಕ ವೃತ್ತಿಬದುಕು ಆರಂಭಿಸಿದ ಅವರು, ಇಂದಿಗೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಆಕೆಯ ಸೌಂದರ್ಯ ಹಾಗೂ ಪ್ರತಿಭೆಯೇ ಚಿತ್ರರಂಗದಲ್ಲಿ ಗಟ್ಟಿಯಾಗಿ ಉಳಿಯಲು ನೆರವಾಗಿದೆ ಎಂದು ಬಿಡಿಸಿ ಹೇಳಬೇಕಿಲ್ಲ.

ತ್ರಿಷಾಗೆ ಈಗ 37 ವರ್ಷ. ಕಾಲಿವುಡ್‌ನ ಈ ಎವರ್‌ಗ್ರೀನ್ ಚೆಲುವೆ ಯಾವಾಗ ಮದುವೆಯಾಗುತ್ತಾರೆ ಎಂಬುದು ಆಕೆಯ ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆ. 2015ರಲ್ಲಿ ವರುಣ್‌ ಮಾನಿಯನ್‌ ಎಂಬಾತನ ಜೊತೆಗೆ ತ್ರಿಷಾ ಅವರ ನಿಶ್ಚಿತಾರ್ಥ ನೆರವೇರಿತ್ತು. ಆದರೆ, ಈ ವಿವಾಹ ಮುರಿದು ಬಿತ್ತು. ಇದಕ್ಕೆ ನಿರ್ದಿಷ್ಟ ಕಾರಣವೇನೆಂಬುದು ತಿಳಿದುಬರಲಿಲ್ಲ. ಇದಾದ ಬಳಿಕ ತ್ರಿಷಾ ನಟ ರಾನಾ ದಗ್ಗುಬಾಟಿಯ ಪ್ರೇಮಪಾಶಕ್ಕೆ ಸಿಲುಕಿದರು. ಈ ಇಬ್ಬರೂ ಹಸೆಮಣೆ ಏರುವುದು ನಿಶ್ಚಿತ ಎಂಬ ಸುದ್ದಿ ಹರಡಿತ್ತು. ಆದರೆ, ರಾನಾ ತನ್ನ ದೀರ್ಘಕಾಲದ ಗೆಳತಿ ಮಿಹಿಕಾ ಬಜಾಜ್ ಅವರನ್ನು ಕೈಹಿಡಿಯುವುದಾಗಿ ಘೋಷಿಸಿದ್ದು, ಈ ಜೋಡಿ ಆಗಸ್ಟ್‌ನಲ್ಲಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡಲಿದೆ.

ಈಗ ತ್ರಿಷಾ ತಮಿಳಿನ ವಿವಾದಾತ್ಮಕ ನಟ ಶಿಂಬು ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ. ಲಾಕ್‌ಡೌನ್‌ ಮುಗಿದ ಬಳಿಕ ಇಬ್ಬರೂ ಹಸೆಮಣೆ ಏರಲಿದ್ದಾರಂತೆ. ಅಂದಹಾಗೆ ಶಿಂಬು ಈ ಹಿಂದೆ ನಟಿ ಹನ್ಸಿಕಾ ಮೋಟ್ವಾನಿಯ ಪ್ರೇಮಪಾಶಕ್ಕೆ ಸಿಲುಕಿದ್ದರು. ವಿವಾಹವಾದ ನಂತರ ಸಿನಿಮಾಗಳಲ್ಲಿ ನಟಿಸಬಾರದೆಂದು ಶಿಂಬು ಅವರ ತಾಯಿ ಹನ್ಸಿಕಾಗೆ ಷರತ್ತು ವಿಧಿಸಿದ್ದರಂತೆ. ಹಾಗಾಗಿಯೇ, ಈ ಇಬ್ಬರ ಪ್ರೀತಿ ಮುರಿದುಬಿದ್ದಿತ್ತು.

ತ್ರಿಷಾ ಮತ್ತು ಶಿಂಬು ‘ಏ ಮಾಯ ಚೆಸಾವೆ’ ತಮಿಳು ರಿಮೇಕ್‌ನಲ್ಲಿ ನಟಿಸಿದ್ದಾರೆ. ಪ್ರಸ್ತುತ ಈ ಇಬ್ಬರು ಗೌತಮ್‌ ಮೆನನ್‌ ನಿರ್ದೇಶನದ ‘ಕಾರ್ತಿಕ್ ಡಯಲ್ ಸೀತಾ ಯೆನ್’ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು