ಮಂಗಳವಾರ, ಮೇ 18, 2021
24 °C
ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ಹೇಳಿಕೆ

ಟ್ವಿಟರ್‌ನಲ್ಲಿ ಟ್ರೆಂಡ್‌: ಸುಶಾಂತ್‌ ಸಿಂಗ್ ಪ್ರಕರಣಕ್ಕೆ ಸಿಬಿಐ ಇತಿಶ್ರೀ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ದಿವಂಗತ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿಗೆ ಸಂಬಂಧಿಸಿ ಹೇಳಿಕೆಯೊಂದು ಸುಶಾಂತ್ ಲವರ್‌ ಹೆಸರಿನ ಟ್ವಿಟರ್‌ ಖಾತೆಯಲ್ಲಿ ಟ್ರೆಂಡ್‌ ಆಗಿದೆ.

ಸಿಬಿಐ ಸುಶಾಂತ್‌ ಸಿಂಗ್ ರಜಪೂತ್‌ ಕೊಲೆ ಪ್ರಕರಣವನ್ನು ಮುಕ್ತಾಯಗೊಳಿಸಿದೆ (Miss you so much Anni... CBI Conclude SSR Murder) ಎಂಬ ಸಂದೇಶ ಸುಶಿ ಲವ್ವರ್‌ ಹೆಸರಿನ ಖಾತೆಯಿಂದ ಹರಿದಾಡುತ್ತಿದೆ. ಅದಕ್ಕೆ ನೂರಾರು ಮಂದಿ ರಿಟ್ವೀಟ್‌ ಮಾಡಿದ್ದಾರೆ.

ದಿವಂಗತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಟನೆಯ ‘ಚಿಚೋರೆ’ ಚಿತ್ರವು ಅತ್ಯುತ್ತಮ ಹಿಂದಿ ಚಿತ್ರವೆಂದು ಘೋಷಣೆ ಆದ ಮರುದಿನ ಈ ಸಾಲು ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಇದ್ದಕ್ಕಿದ್ದಂತೆಯೇ ಈ ಹೆಸರಿನ ಖಾತೆ (ಸುಶಾಂತ್‌ ಲವರ್‌) ಹೇಗೆ ಸೃಷ್ಟಿಯಾಯಿತು? ಅದರ ಬ್ಯಾಕ್‌ ಅಪ್‌ ಯಾರ ಬಳಿ ಇತ್ತು ಎಂಬ ಕುತೂಹಲದ ಪ್ರಶ್ನೆಯನ್ನೂ ಹಲವರು ಎತ್ತಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು