ಗುರುವಾರ , ಡಿಸೆಂಬರ್ 3, 2020
20 °C

'ಅಮೃತ್ ಅಪಾರ್ಟ್‌ಮೆಂಟ್ಸ್‌’ಗೆ ಯು/ಎ ಪ್ರಮಾಣಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಾರಕ್‌ ಪೊನ್ನಪ್ಪ ಮತ್ತು ಊರ್ವಶಿ ಗೋವರ್ಧನ ಅವರು ಪ್ರಧಾನ ಭೂಮಿಕೆಯಲ್ಲಿರುವ ‘ಅಮೃತ್ ಅಪಾರ್ಟ್‌ಮೆಂಟ್ಸ್‌’ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಚಿತ್ರಮಂದಿರಗಳ ಚಟುವಟಿಕೆ ಸಹಜ ಸ್ಥಿತಿಗೆ ಮರಳಿದ ನಂತರ ಈ ಚಿತ್ರವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ.

ಜಿ-9 ಕಮ್ಯುನಿಕೇಷನ್ ಮೀಡಿಯಾ ಆ್ಯಂಡ್ ಎಂಟರ್‌ಟೈನ್‌ಮೆಂಟ್‌ ಬ್ಯಾನರ್ ಅಡಿ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ರಚಿಸಿ, ನಿರ್ಮಿಸಿ ಹಾಗೂ ನಿರ್ದೇಶಿಸಿದ್ದಾರೆ ಈ ಚಿತ್ರವನ್ನು. ‘ಇಡೀ ಚಿತ್ರ ತಾಜಾತನದಿಂದ ಕೂಡಿದ್ದು, ತುಂಬಾ ಮನರಂಜನೆ ನೀಡುವಂತಿದೆ. ಚಿತ್ರದ ಕಥೆಯೂ ಕುತೂಹಲಕಾರಿಯಾಗಿದ್ದು, ಕುಟುಂಬ ಸಮೇತ ಪ್ರೇಕ್ಷಕರು ಚಿತ್ರ ವೀಕ್ಷಿಸಬಹುದು’ ಎನ್ನುವುದು ಅವರ ಆಂಬೋಣ.

ಬಾಲಾಜಿ ಮನೋಹರ ಆಟೋ ಚಾಲಕ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಂಪತ್‌ ಕುಮಾರ, ಮಾನಸ ಜೋಷಿ, ಸೀತಾ ಕೋಟೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಭೂಮಿ ಕಲಾವಿದರಾದ, ಸಿತಾರಾ, ಮಾಲತೇಶ, ರಾಜ ನೀನಾಸಂ, ಜಗದೀಶ ಜಾಲಾ, ರಂಗಸ್ವಾಮಿ, ಶಂಕರ ಶೆಟ್ಟಿ, ವೈಷ್ಣವಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಅರ್ಜುನ್ ಅಜಿತ್‌ ಛಾಯಾಗ್ರಹಣ, ಬಿ.ಎಸ್. ಕೆಂಪರಾಜ್ ಸಂಕಲನ, ಮೂರು ಗೀತೆಗಳಿಗೆ ಎಸ್.ಡಿ. ಅರವಿಂದ್ ಸಂಗೀತ ಸಂಯೋಜನೆ, ಎ.ಎಂ. ಶಾ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಸೌಂಡ್ ಡಿಸೈನರ್ ರಾಜನ್ ವಿಶೇಷ ಎಫೆಕ್ಟ್ಸ್‌ಗಳನ್ನು ಈ ಚಿತ್ರಕ್ಕಾಗಿಯೇ ಬಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು