ದುಬೈ: ಸಾರ್ವಜನಿಕ ಸ್ಥಳದಲ್ಲಿ ‘ಅಂಗಾಂಗ ಪ್ರದರ್ಶನ ಮಾಡುವ’ ಬಟ್ಟೆ ಧರಿಸಿ ಚಿತ್ರೀಕರಣ ಮಾಡಿದ ನಟಿ ಉರ್ಫಿ ಜಾವೇದ್ರನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಮೂಲಗಳನ್ನು ಉಲ್ಲೇಖಿಸಿ ಹಿಂದೂಸ್ಥಾನ್ ಟೈಮ್ಸ್ ಈ ವರದಿ ಮಾಡಿದೆ.

ತಮ್ಮ ಮುಂಬರುವ ಪ್ರಾಜೆಕ್ಟ್ಗಳ ಚಿತ್ರೀಕರಣಕ್ಕಾಗಿ ಉರ್ಫಿ ಅವರು ಯುಎಇಗೆ ತೆರಳಿದ್ದರು. ಕಳೆದೊಂದು ವಾರದಿಂದ ಅಲ್ಲಿಯೇ ಇರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದರು.

ತೆರೆದ ಸ್ಥಳದಲ್ಲಿ, ‘ಸಾರ್ವಜನಿಕ ಪ್ರದೇಶದಲ್ಲಿ ಧರಿಸಲು ಅವಕಾಶ ಇಲ್ಲದಿರುವ ಬಟ್ಟೆ‘ಯನ್ನು ಧರಿಸಿ ಚಿತ್ರೀಕರಣ ಮಾಡುತ್ತಿದ್ದರು. ಹೀಗಾಗಿ ವಿಚಾರಣೆ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಉರ್ಫಿ ಅವರು ಧರಿಸಿದ ಬಟ್ಟೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಅವರು ತೆರದ ಪ್ರದೇಶದಲ್ಲಿ ಚಿತ್ರೀಕರಣ ಮಾಡಿದ್ದು ಸಮಸ್ಯೆ ಉಂಟು ಮಾಡಿದೆ‘ ಎಂದು ವರದಿಯಲ್ಲಿ ಹೇಳಲಾಗಿದೆ.

ಪೊಲೀಸರು ವಶಕ್ಕೆ ಪಡೆದಿರುವುದರಿಂದ ಅವರು ಭಾರತಕ್ಕೆ ಮರಳಿ ಬರುವುದು ತಡವಾಗಲಿದೆ ಎಂದು ತಿಳಿದು ಬಂದಿದೆ.

ಚಿತ್ರವಿಚಿತ್ರ ಉಡುಪುಗಳನ್ನು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಉರ್ಫಿ ಜಾವೇದ್ ಸದಾ ಸುದ್ದಿಯಲ್ಲಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.