‘ಯುಐ’ ಬಳಿಕ ಉಪೇಂದ್ರ ಬಳಿ ಸಾಲು ಸಾಲು ಚಿತ್ರಗಳಿವೆ. ತಮಿಳಿನ ‘ಕೂಲಿ’ ಸಿನಿಮಾದಲ್ಲಿ ರಜನಿಕಾಂತ್ ಜತೆ ನಟಿಸಿರುವುದು ಗೊತ್ತೇ ಇದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರ ಆ.14ರಂದು ತೆರೆಗೆ ಬರುತ್ತಿದೆ. ಇದೀಗ ತೆಲುಗಿನ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಅಭಿನಯಿಸು ತ್ತಿದ್ದಾರೆ. ರಾಮ್ ಪೋತಿನೇನಿ ಅವರ 22ನೇ ಸಿನಿಮಾವಿದು. ಸದ್ಯ ‘RAPO22’ ಎಂಬ ಶೀರ್ಷಿಕೆಯಿದೆ. ಇದರಲ್ಲಿ ಉಪೇಂದ್ರ ಸೂರ್ಯ ಕುಮಾರ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರತಂಡ ಉಪೇಂದ್ರ ಪಾತ್ರ ಪರಿಚಯಿಸುವ ಪೋಸ್ಟರ್ ಬಿಡುಗಡೆ ಮಾಡಿದೆ.

ಈ ಚಿತ್ರಕ್ಕೆ ಮಹೇಶ್ ಬಾಬು ನಿರ್ದೇಶನವಿದೆ. ಇವರು ಈ ಹಿಂದೆ ತೆಲುಗಿನ ಸೂಪರ್ ಹಿಟ್ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರ ನಿರ್ದೇಶಿಸಿದ್ದರು. ಚಿತ್ರದಲ್ಲಿ ಪೋತಿನೇನಿ ಸಾಗರ್ ಕುಮಾರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಪೇಂದ್ರ, ನಾಯಕನ ಸಹೋದರ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು ಎನ್ನಲಾಗಿದೆ.

ಭಾಗ್ಯಶ್ರೀ ಬೋರ್ಸೆ ನಾಯಕಿ. ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಇದೀಗ ನಟ ಉಪೇಂದ್ರ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ತೆಲುಗಿನ ಜನಪ್ರಿಯ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಬೃಹತ್ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಿಸುತ್ತಿದೆ.

ದಶಕಗಳಿಂದಲೂ ಉಪೇಂದ್ರ ತೆಲುಗು ಚಿತ್ರರಂಗದೊಂದಿಗೆ ನಂಟು ಹೊಂದಿದ್ದಾರೆ. ಅಲ್ಲಿ ಅವರದ್ದೇ ಆದ ಅಭಿಮಾನಿ ಬಳಗವೂ ಇದೆ. ಹೀಗಾಗಿ ಅವರು ತಮ್ಮ ‘ಯುಐ’ ಚಿತ್ರವನ್ನು ತೆಲುಗಿನಲ್ಲಿಯೂ ಬಹಳ ಮುತುವರ್ಜಿ ವಹಿಸಿ ಬಿಡುಗಡೆ ಮಾಡಿದ್ದರು. 1997ರಲ್ಲಿ ‘ಓಂಕಾರ’ ಎಂಬ ತೆಲುಗು ಸಿನಿಮಾ ನಿರ್ದೇಶನ ಮಾಡಿದ್ದರು. ಅದು ಕನ್ನಡದ ‘ಓಂ’ ಸಿನಿಮಾದ ರೀಮೇಕ್. ‘ಕನ್ಯಾದಾನಂ’, ‘ಒಕೇ ಮಾಟ’, ಅಲ್ಲು ಅರ್ಜುನ್ ಜತೆ ‘ಸನ್ ಆಫ್ ಸತ್ಯಮೂರ್ತಿ’ ಮೊದಲಾದ ಚಿತ್ರಗಳಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದಾರೆ.

ಸದ್ಯ ಅವರು ಅರ್ಜುನ್ ಜನ್ಯ ನಿರ್ದೇಶನದ ‘45’ ಚಿತ್ರದಲ್ಲಿ ಮಗ್ನರಾಗಿದ್ದಾರೆ. ‘ಬುದ್ಧಿವಂತ–2’ ಬಿಡುಗಡೆಗೆ ಸಿದ್ಧವಿದೆ. ನಿರ್ದೇಶಕ ನಾಗಣ್ಣ ಜತೆ ‘ಭಾರ್ಗವ’ ಸಿನಿಮಾ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.