ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೀರವ್ವ’ ಪಾತ್ರದಲ್ಲಿ ಭಾವನಾ ಮೆನನ್‌

Published 8 ಜೂನ್ 2024, 0:36 IST
Last Updated 8 ಜೂನ್ 2024, 0:36 IST
ಅಕ್ಷರ ಗಾತ್ರ

ರೋಹಿತ್‌ ಪದಕಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ, ಶಿವರಾಜ್‌ಕುಮಾರ್‌ ಹಾಗೂ ಧನಂಜಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಉತ್ತರಕಾಂಡ’ ಸಿನಿಮಾ ಸೆಟ್‌ಗೆ ಇದೀಗ ಭಾವನಾ ಮೆನನ್‌ ಪ್ರವೇಶಿಸಿದ್ದಾರೆ.  

ವಿಜಯಪುರ, ಬೆಳಗಾವಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಬಹುಭಾಷಾ‌ ತಾರೆ ಭಾವನಾ ‘ಉತ್ತರಕಾಂಡ’ ಚಿತ್ರದಲ್ಲಿ ‘ವೀರವ್ವ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವರಾಜ್‌ಕುಮಾರ್‌ ಅವರೊಡನೆ ಭಾವನಾ ತೆರೆಹಂಚಿಕೊಳ್ಳಲಿದ್ದು, ‘ಟಗರಯ’ ಹಾಗೂ ‘ಭಜರಂಗಿ–2’ ಬಳಿಕ ಈ ಜೋಡಿ ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಳ್ಳಲಿದೆ. 

‘ಉತ್ತರಕಾಂಡ’ ಒಂದು ಆ್ಯಕ್ಷನ್ ಡ್ರಾಮ ಚಿತ್ರವಾಗಿದ್ದು, ಐಶ್ವರ್ಯ ರಾಜೇಶ್, ದಿಗಂತ್ ಮಂಚಾಲೆ, ರಂಗಾಯಣ ರಘು, ಚೈತ್ರಾ ಜೆ. ಆಚಾರ್, ವಿಜಯ್ ಬಾಬು, ಗೋಪಾಲಕೃಷ್ಣ ದೇಶಪಾಂಡೆ, ಉಮಾಶ್ರೀ, ಯೋಗರಾಜ್‌ ಭಟ್‌ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಛಾಯಾಚಿತ್ರಗ್ರಹಣವಿದೆ. ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ. ರಾಜ್ ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT