ಗುರುವಾರ , ಮೇ 26, 2022
26 °C

ಪ್ರಿಯತಮನ ಪರಿಚಯ ಮಾಡಿಕೊಟ್ಟ ’ವಜ್ರಕಾಯ’ ಬೆಡಗಿ ಶುಭ್ರಾ ಅಯ್ಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂದನವನದ ನಟಿ ಹಾಗೂ ರೂಪದರ್ಶಿ ಶುಭ್ರಾ ಅಯ್ಯಪ್ಪ ಅವರು ಭಾವಿ ಪತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರಿಚಯ ಮಾಡಿಕೊಟ್ಟಿದ್ದಾರೆ.

ಶುಭ್ರಾ ಅಯ್ಯಪ್ಪ ಅವರು ಶಿವಣ್ಣ ಅಭಿನಯದ ’ವಜ್ರಕಾಯ’ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದು ಅವು ಇನ್ನು ಬಿಡುಗಡೆಯಾಗಿಲ್ಲ. ಶುಭ್ರಾ ಸಿನಿಮಾರಂಗಕ್ಕಿಂತ ರೂಪದರ್ಶಿಯಾಗಿ ಹೆಚ್ಚು ಖ್ಯಾತಿಯಾಗಿದ್ದಾರೆ. 

ಭಾವಿ ಪತಿ ವಿಶಾಲ್ ಶಿವಪ್ಪನ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ’ನಾನು ನನ್ನ ಪಾಂಡೆಗೆ ಎಸ್‌ ಎಂದು ಬಿಟ್ಟೆ’ ಎಂದು ಬರೆದುಕೊಂಡಿದ್ದಾರೆ. ಅವರ ಕೈಯಲ್ಲಿ ಉಂಗುರ ಇರುವುದನ್ನು ಗಮನಿಸಿರುವ ನೆಟ್ಟಿಗರು ಶುಭ್ರಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.

ಶುಭ್ರಾ ಮಾತ್ರ ನಿಶ್ಚಿತಾರ್ಥ, ಮದುವೆ ಬಗ್ಗೆ ಯಾವುದೇ ಮಾಹಿತಿ ನೀಡದೇ ತಮ್ಮ ಮುದ್ದು ಹುಡುಗನ ಪರಿಚಯ ಮಾತ್ರ ಮಾಡಿಕೊಟ್ಟಿದ್ದಾರೆ. 

ಇದನ್ನೂ ಓದಿ: ಯುವರಾಜ ನಿಖಿಲ್‌ ಈಗ ಯದುವೀರ!

ವಿಶಾಲ್‌ ಶಿವಪ್ಪ ಅಡ್ವೆಂಚರ್‌ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಲಾಗುತ್ತಿದ್ದು ಅವರ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. 

ಇದನ್ನೂ ಓದಿ: ಯೋಗಿ - ಅದಿತಿ ಪ್ರಭುದೇವ ನಟನೆಯ ಒಂಬತ್ತನೇ ದಿಕ್ಕು 28ರಂದು ಬಿಡುಗಡೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು