ಶುಕ್ರವಾರ, ಆಗಸ್ಟ್ 12, 2022
24 °C

ಮಗನಿಗೆ ಏನೆಂದು ಹೆಸರಿಡಲಿ?: ಅಭಿಮಾನಿಗಳನ್ನು ಕೇಳಿದ ವರುಣ್ ಧವನ್

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

Varun Dhawan Instagram

ಬೆಂಗಳೂರು: ತನ್ನ ಮಗನಿಗೆ ಹೆಸರು ಸೂಚಿಸುವಂತೆ ಬಾಲಿವುಡ್ ನಟ ವರುಣ್ ಧವನ್ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.

ಕಳೆದ ಜನವರಿಯಲ್ಲಿ ಫ್ಯಾಶನ್ ಡಿಸೈನರ್ ನತಾಶಾ ದಲಾಲ್ ಜತೆ ಮದುವೆಯಾಗಿದ್ದ ವರುಣ್ ದಂಪತಿಗೆ ಇಷ್ಟು ಬೇಗ ಮಕ್ಕಳಾಯಿತೇ ಎಂದುಕೊಂಡರೆ ಅದು ತಪ್ಪು.

ಇಲ್ಲಿ ವರುಣ್ ಮಗ ಎಂದಿರುವುದು ಪುಟ್ಟ ಬೀಗಲ್ ನಾಯಿಮರಿಯನ್ನು.. ಮನೆಗೆ ಪುಟ್ಟ ಬೀಗಲ್ ತಂದಿರುವ ವರುಣ್, ಇನ್ನು ಕೂಡ ಸೂಕ್ತ ಹೆಸರನ್ನು ಆಯ್ಕೆ ಮಾಡಿಕೊಂಡಿಲ್ಲ ಎಂದು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಹೆಸರಿಡಲು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಅಲ್ಲದೆ, ತಾನು ಪಿತೃತ್ವವನ್ನು ಆನಂದಿಸುತ್ತಿದ್ದೇನೆ ಎಂದು ವರುಣ್ ಧವನ್ ತಿಳಿಸಿದ್ದಾರೆ.

ಧವನ್ ಪೋಸ್ಟ್‌ಗೆ ಹಲವರು ಕಮೆಂಟ್ ಮಾಡಿ ಪುಟ್ಟ ಬೀಗಲ್‌ಗೆ ಮುದ್ದಾದ ಹೆಸರುಗಳನ್ನು ಸೂಚಿಸಿದ್ದಾರೆ. ಟೈಗರ್ ಶ್ರಾಫ್ ಸೋ ಕ್ಯೂಟ್ ಎಂದರೆ, ಜಾಕೆಲಿನ್ ಫರ್ನಾಂಡಿಸ್ ತನ್ನ ಬೆಕ್ಕುಗಳ ಜತೆ ವರುಣ್ ಬೀಗಲ್‌ಗೆ ಪ್ಲೇ ಡೇಟ್ ವ್ಯವಸ್ಥೆ ಮಾಡುತ್ತೇನೆ ಎಂದಿದ್ದಾರೆ.

ಜೋಯಾ ಅಖ್ತರ್, ಸೋಫಿ ಚೌಧರಿ ಸಹಿತ ಹಲವು ಸೆಲೆಬ್ರಿಟಿಗಳು ಮತ್ತು ವರುಣ್ ಅಭಿಮಾನಿಗಳು ಬೀಗಲ್‌ಗೆ ಹೆಸರು ಸೂಚಿಸಿ ಕಮೆಂಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು