ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟ ವರುಣ್ ಧವನ್‌-ನತಾಶಾ ದಲಾಲ್ ದಂಪತಿ

Published 5 ಜೂನ್ 2024, 5:08 IST
Last Updated 5 ಜೂನ್ 2024, 5:08 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ವರುಣ್ ಧವನ್‌, ಪತ್ನಿ ನತಾಶಾ ದಲಾಲ್ ಹೆಣ್ಣು ಮಗುವಿನ ಪೋಷಕರಾಗಿರುವ ಸಂತಸವನ್ನು ಹಂಚಿಕೊಂಡಿದ್ದಾರೆ.

ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.

'ಜೂನ್‌ 3ರಂದು ಮೊದಲ ಮಗುವನ್ನು ನಾವು ಬರ ಮಾಡಿಕೊಂಡಿದ್ದೇವೆ. ತಾಯಿ ಹಾಗೂ ಮಗುವಿನ ಕ್ಷೇಮ ಕೋರಿ ಶುಭಾಶಯ ತಿಳಿಸಿದ ಅಭಿಮಾನಿಗಳು ಹಾಗೂ ಆಪ್ತರಿಗೆ ಧನ್ಯವಾದ' ತಿಳಿಸಿದ್ದಾರೆ

ಬಾಲಿವುಡ್‌ನ ಕರಣ್ ಜೋಹರ್, ಕರೀನಾ ಕಪೂರ್ ಖಾನ್, ಅಭಿಷೇಕ್ ಬಚ್ಚನ್, ಸನ್ಯಾ ಮಲ್ಹೋತ್ರಾ, ಸಮಂತಾ ರುತ್ ಪ್ರಭು, ಪ್ರಿಯಾಂಕಾ ಚೋಪ್ರಾ, ಪರಿಣಿತಿ ಚೋಪ್ರಾ ಸೇರಿದಂತೆ ಚಿತ್ರರಂಗದವರು ಶುಭ ಹಾರೈಸಿದ್ದಾರೆ.

ಧವನ್ ಅಭಿನಯ‌ದ ಬೇಬಿ ಜಾನ್‌ ಚಿತ್ರವು ಮೇ 31ರಂದು ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

‘ಸಿಟಾಡೆಲ್: ಹನಿ ಬನ್ನಿ’ ವೆಬ್‌ ಸಿರೀಸ್‌ನಲ್ಲಿ ಧವನ್‌ಗೆ ಜತೆ ಜೋಡಿಯಾಗಿ ರಾಕುಲ್‌ ಪ್ರೀತ್‌ ಸಿಂಗ್‌ ನಟಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT