ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ನಟ ಶಿವರಾಜ್ ಕುಮಾರ್ ಅವರ 125ನೇ ಚಿತ್ರ ‘ವೇದ’ ಬಿಡುಗಡೆಗೆ ಸಜ್ಜಾಗಿದ್ದು, ಡಿ.10ರಂದು ಮಂಗಳೂರಿನ ಪಣಂಬೂರು ಕಡಲತೀರದಲ್ಲಿ ಸಿನಿಮಾದ ಪ್ರಿರಿಲೀಸ್ ಕಾರ್ಯಕ್ರಮ ನಡೆಯಲಿದೆ.

ಡಿ.23ರಂದು ‘ವೇದ’ ಸಿನಿಮಾ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ‘ಗಿಲಕ್ಕೊ ಶಿವ ಗಿಲಕ್ಕೊ’ ಹಾಡು ಹಿಟ್ ಆಗಿದೆ. ಇತ್ತೀಚೆಗಷ್ಟೇ ರಾಯಚೂರಿನಲ್ಲಿ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಎ.ಹರ್ಷ ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 4ನೇ ಚಿತ್ರ ಇದಾಗಿದೆ.ಈ ಹಿಂದೆ ಹರ್ಷ ನಿರ್ದೇಶನದ ‘ವಜ್ರಕಾಯ’, ‘ಭಜರಂಗಿ’, ‘ಭಜರಂಗಿ–2’ ಚಿತ್ರದಲ್ಲಿ ಶಿವರಾಜ್ಕುಮಾರ್ ನಟಿಸಿದ್ದರು. ‘ದಿ ಬ್ರೂಟಲ್ 1960’ ಎಂಬ ಟ್ಯಾಗ್ಲೈನ್ ಚಿತ್ರಕ್ಕಿದ್ದು, 1960ರ ದಶಕದಲ್ಲಿ ನಡೆಯುವ ಕಥಾವಸ್ತುವಿನ ಸುತ್ತ ಹೆಣೆದ ಕಥೆ ಇದಾಗಿದೆ.

ಪೆಪ್ಪರ್ ಸ್ಪ್ರೇ ಗಿಫ್ಟ್!

ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶಿವರಾಜ್ಕುಮಾರ್ ಅವರು ಕನ್ನಡ ಚಿತ್ರರಂಗದ ಹಲವು ಕಲಾವಿದರಿಗೆ, ಪ್ರಮುಖವಾಗಿ ಮಹಿಳಾ ಕಲಾವಿದರಿಗೆ ವಿಶೇಷ ಗಿಫ್ಟ್ ಒಂದನ್ನು ಕಳುಹಿಸಿಕೊಟ್ಟಿದ್ದಾರೆ. ವಿಶೇಷ ಏನೆಂದರೆ ಈ ಗಿಫ್ಟ್ ಜೊತೆಗೆ ಪೆಪ್ಪರ್ ಸ್ಪ್ರೇ ಒಂದನ್ನೂ ಶಿವರಾಜ್ಕುಮಾರ್ ಕಳುಹಿಸಿಕೊಟ್ಟಿದ್ದಾರೆ. ‘ಹೇಗಿದ್ದೀರಿ? ಕುಕೀಸ್ ಥರ ಸ್ವೀಟಾಗೇ ಇರ್ತೀರಿ! ಎಷ್ಟಂದ್ರೂ ಹೂ ಮನಸ್ಸಿನ ಹೆಣ್ಣು ಮಕ್ಳಲ್ವಾ ನೀವು? ಆದ್ರೂ ಸಮಯ ಬಂದಾಗ ಮುಳ್ಳಿಂದ ನೀವು ನಿಮ್ಮನ್ನ ಕಾಪಾಡಿಕೊಳ್ಳಬೇಕಾಗುತ್ತೆ! ಅದಕ್ಕೋಸ್ಕರ ಈ ಗಿಫ್ಟ್ ಬಾಕ್ಸ್ನಲ್ಲಿ ಒಂದು ಪೆಪ್ಪರ್ ಸ್ಪ್ರೇ ಇಟ್ಟಿದ್ದೀನಿ. ಇದನ್ನು ಬಳಸುವುದಕ್ಕೆ ಹಿಂಜರೀಬೇಡಿ. ಬಿ ಬ್ರೇವ್! ಕಾಟ ಕೊಡಕ್ ಬಂದೋರಿಗೆ ಸರಿಯಾಗಿ ಪಾಠ ಕಲ್ಸಿ. ಐ ಪ್ರಾಮಿಸ್, ನೀವು ಯಾವತ್ತೂ ಇದನ್ನು ಬಳಸೋ ಅಗತ್ಯ ಬೀಳ್ದಿರೋ ಹಾಗೆ ನಾವ್ ನೋಡ್ಕೋತೀವಿ. ‘ವೇದ’ ಸಿನಿಮಾ ನೋಡಿದರೆ ನೀವು ಖಂಡಿತಾ ಹೆಮ್ಮೆ ಪಡ್ತೀರಿ’ ಎಂದು ಒಂದು ಪತ್ರವನ್ನೂ ಶಿವರಾಜ್ಕುಮಾರ್ ಗಿಫ್ಟ್ ಜೊತೆ ಕಳುಹಿಸಿದ್ದಾರೆ.

1986ರಲ್ಲಿ ‘ಆನಂದ್’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಹೆಜ್ಜೆ ಇಟ್ಟ ಶಿವರಾಜ್ಕುಮಾರ್ ಅವರು ತಮ್ಮ ಈ 36 ವರ್ಷದ ಸುದೀರ್ಘ ಸಿನಿಪಯಣದಲ್ಲಿ ಪ್ರಸ್ತುತ 125ನೇ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.