‘ಮನಸಾಗಿದೆ’ ಮತ್ತು ‘ಮಂಡ್ಯ ಹೈದ’ ಸಿನಿಮಾ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿರುವ ಯುವ ನಟ ಅಭಯ್ ಚಂದ್ರು ಮೂರನೇ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ.

ಇತ್ತೀಚೆಗೆ ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ಅವರು ಅಭಯ್ ಹೊಸ ಸಿನಿಮಾ ‘ವೀರಂ ವಿರೋಧಂ’ ಎಂಬ ಶೀರ್ಷಿಕೆ ಹಾಗೂ ಫಸ್ಟ್ಲುಕ್ ಬಿಡುಗಡೆಗೊಳಿಸಿದರು. ತೇಜಸ್ ಕ್ರಿಯೇಶನ್ಸ್ ಅಡಿಯಲ್ಲಿ ಐದು ಚಿತ್ರಗಳನ್ನು ನಿರ್ಮಾಣ ಮಾಡಿರುವ ಎಸ್. ಚಂದ್ರಶೇಖರ್ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಮೂಲಕ ಅವರು ನಿರ್ದೇಶನದಲ್ಲಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಅವರೇ ಸಿನಿಮಾಗೆ ಬಂಡವಾಳ ಹೂಡುವುದರ ಜೊತೆಗೆ ಕಥೆಯನ್ನೂ ಬರೆದಿದ್ದಾರೆ. ‘ಇದೊಂದು ಸೆಸ್ಪೆನ್ಸ್, ಥ್ರಿಲ್ಲರ್ ಹಾಗೂ ಮಿಸ್ಟರಿ ಅಂಶಗಳು ಇರುವ ಕಥೆಯಾಗಿದೆ. ಅಭಯ್ ಚಂದ್ರು ಜನ್ಮದಿನದ ಅಂಗವಾಗಿ ಫಸ್ಟ್ಲುಕ್ ಬಿಡುಗಡೆ ಮಾಡಿದ್ದೇವೆ. ನಾಯಕಿ, ತಾರಾಗಣದ ವಿವರವನ್ನು ಮುಹೂರ್ತ ನೀಡುತ್ತೇವೆ’ ಎಂದಿದ್ದಾರೆ ಚಂದ್ರಶೇಖರ್.

ಅಭಯ್ ಈ ಸಿನಿಮಾದಲ್ಲಿ ಇನ್ಸ್ಪೆಕ್ಟರ್ ಆಗಿ ನಟಿಸುತ್ತಿದ್ದು, ಸಂತೋಷ್ ಜೋಶ್ವಾ ಸಂಗೀತ, ಶಂಕರ್ ಛಾಯಾಚಿತ್ರಗ್ರಹಣ, ವೆಂಕಟ್ ಗೌಡ ಎಸ್. ಸಂಕಲನ, ರವಿವರ್ಮಾ-ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಕಂಬಿರಾಜು ನೃತ್ಯ ನಿರ್ದೇಶನ ಚಿತ್ರಕ್ಕಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.