ಭಾನುವಾರ, ಅಕ್ಟೋಬರ್ 24, 2021
21 °C

₹18,000ಕ್ಕೆ ಮೊದಲ ಕಾರು ಖರೀದಿಸಿದ್ದ ನಟ ಧರ್ಮೇಂದ್ರ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Dharmendra Instagram post

ಬೆಂಗಳೂರು: ಖ್ಯಾತ ನಟ ಧರ್ಮೇಂದ್ರ ಅವರು ಮೊದಲ ಕಾರು ಖರೀದಿಸಲು ₹18,000 ವೆಚ್ಚ ಮಾಡಿದ್ದೆ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿರುವ ಧರ್ಮೇಂದ್ರ, 1960ರಲ್ಲಿ ಫಿಯೆಟ್ ಕಂಪನಿಯ ಕಾರನ್ನು ಖರೀದಿಸಿದ್ದೆ. ಇದು ನನ್ನ ಮೊದಲ ಕಾರು ಆಗಿದೆ ಎಂದು ವಿಡಿಯೊ ಒಂದನ್ನು ಕೂಡ ಹಂಚಿಕೊಂಡಿದ್ದಾರೆ.

ಅಚ್ಚರಿ ಎಂದರೆ, ಧರ್ಮೇಂದ್ರ ಅವರ ಬಳಿ ಈಗಲೂ ಈ ಕಾರು ಇದ್ದು, ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದರಿಂದ ಸುಸ್ಥಿತಿಯಲ್ಲಿದೆ. ಅಂದಿನ ಕಷ್ಟದ ದಿನಗಳಲ್ಲಿ ₹18,000 ದೊಡ್ಡ ಮೊತ್ತವೇ ಆಗಿತ್ತು. ನನ್ನ ಮೊದಲ ಕಾರು ಆಗಿದ್ದರಿಂದ, ಅದನ್ನು ಈಗಲೂ ಪ್ರೀತಿಯಿಂದ ಉಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಧರ್ಮೇಂದ್ರ ಅವರ ಪೋಸ್ಟ್‌ಗೆ ಕಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಪುತ್ರ, ನಟ ಬಾಬಿ ಡಿಯೋಲ್, ‘ಇದು ಕಾರ್ ಮಾತ್ರವಲ್ಲ, ನಮಗೆ ಹಲವು ಸಿಹಿ ನೆನಪುಗಳನ್ನು ನೀಡಿದೆ, ಪ್ರಯಾಣದ ಸುಂದರ ಕ್ಷಣಗಳನ್ನು ಕಳೆದಿದ್ದೇವೆ' ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು