2020ರಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರ ಎರಡು ಸಿನಿಮಾಗಳು ಬಿಡುಗಡೆಯಾಗಲಿವೆ. ಎರಡೂ ಚಿತ್ರಗಳಲ್ಲೂ ಅವರು ಐತಿಹಾಸಿಕ ಪಾತ್ರಗಳಲ್ಲಿ ಅಭಿನಯಿಸುತ್ತಿರುವುದು ವಿಶೇಷ.

ಶೂಜಿತ್ ಸಿರ್ಕಾರ್ ನಿರ್ದೇಶನದ, ಉಧಾಮ್ ಸಿಂಗ್ ಜೀವನಚರಿತ್ರೆ ಆಧಾರಿತ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅಭಿನಯಿಸುತ್ತಿದ್ದಾರೆ. ಕರಣ್ ಜೋಹರ್ ನಿರ್ದೇಶನದ ‘ತಕ್ತ್’ನಲ್ಲಿಯೂ ಔರಂಗಾಬೇಬ್ ಪಾತ್ರ ನಿರ್ವಹಿಸುತ್ತಿದ್ದಾರೆ.

‘ಶೂಜಿತ್ ನಿರ್ದೇಶನದ ಸಿನಿಮಾಗಳಲ್ಲಿ ದೃಶ್ಯ ವೈಭವದ ಜೊತೆಗೆ ಪಾತ್ರಗಳನ್ನು ಸಮಚಿತ್ತದಿಂದ ಹೆಣೆಯಲಾಗಿರುತ್ತದೆ. ಅವರ ದೃಷ್ಟಿಕೋನ ಹಾಗೂ ಸಿನಿಮಾ ಮಾಡುವ ತಂತ್ರಗಾರಿಕೆಯನ್ನು ಪೂರ್ಣವಾಗಿ ನಾವು ನಂಬಬಹುದು. ‘ಉಧಾಮ್ ಸಿಂಗ್’ ಅವರ ಪಾತ್ರ ಕೂಡ ಅಷ್ಟೇ ಮಹತ್ವದಿಂದ ಕೂಡಿದೆ.’ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ವಿಕ್ಕಿ ಕೌಶಲ್ ಹೇಳಿದ್ದರು.

‘ತಕ್ತ್ನಲ್ಲಿಯೂ ನನಗೆ ಖಳನಾಯಕನ ಪಾತ್ರ ಸಿಕ್ಕಿದೆ. ಇದು ನನ್ನ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸುವುದನ್ನು ಸಾಬೀತುಮಾಡುವ ಅವಕಾಶ ಸಿಕ್ಕಿದೆ. ಈ ಎರಡೂ ಸಿನಿಮಾಗಳ ಬಿಡುಗಡೆಗಾಗಿ ಕುತೂಹಲದಿಂದ ಎದುರು ನೋಡುತ್ತಿದ್ದೇನೆ’ ಎಂದು ವಿಕ್ಕಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.