ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸಕ್ಕೆ ಹಾಜರಾದ ವಿಕ್ಕಿ ಕೌಶಲ್: ಕತ್ರಿನಾ ಎಲ್ಲಿ? ಎಂದು ಅಭಿಮಾನಿಗಳ ಪ್ರಶ್ನೆ

Last Updated 18 ಡಿಸೆಂಬರ್ 2021, 8:47 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹವಾಗಿ ವಾರ ಕಳೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈಗಲೂ ಟ್ರೆಂಡ್ ಆಗಿದ್ದಾರೆ.

ಈ ಮಧ್ಯೆ, ಶನಿವಾರ ವಿಕ್ಕಿ ಕೌಶಲ್ ಕೆಲಸಕ್ಕೆ ವಾಪಸ್ ಆಗಿದ್ದಾರೆ. ಕಾರಿನ ಜೊತೆಗೆ ಸೆಲ್ಫಿಯನ್ನು ಪೋಸ್ಟ್ ಮಾಡಿದ್ದು, ಟೀ, ಕ್ಲ್ಯಾಪ್ ಬೋರ್ಡ್ ಎಮೊಜಿಗಳನ್ನು ಹಾಕಿದ್ದಾರೆ.

ಬೆಳಿಗ್ಗೆ ವಿಕ್ಕಿ ಕೌಶಲ್ ಅವರು ಫೋಟೊ ಹಂಚಿಕೊಂಡ ಕೂಡಲೇ, ಅವರ ಅಭಿಮಾನಿಗಳು ‘ಕತ್ರೀನಾ ಕೈಫ್ ಎಲ್ಲಿದ್ದಾರೆ?’ ಮತ್ತು ‘ಕತ್ರಿನಾ ಭಾಬಿ ಕಿದರ್ ಹೈ?’ ಎಂದು ಪ್ರಶ್ನೆ ಎತ್ತಿದ್ದಾರೆ. ‘ದಯವಿಟ್ಟು ಕತ್ರಿನಾ ಕೈಫ್ ಅವರೊಂದಿಗೆ ಫೋಟೊ ಪೋಸ್ಟ್ ಮಾಡಿ’ಎಂದು ಮತ್ತೊಬ್ಬರು ಮನವಿ ಮಾಡಿದ್ದಾರೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ವಿವಾಹವು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಫೋರ್ಟ್ ಬರ್ವಾರದ ಸಿಕ್ಸ್ ಸೆನ್ಸ್ ರೆಸಾರ್ಟ್‌ನಲ್ಲಿ ಡಿಸೆಂಬರ್ 9 ರಂದು ನೆರವೇರಿತ್ತು.

ಮದುವೆ ಬಳಿಕ ಮನೆಯ ಸಂಭ್ರಮದ ಚಿತ್ರಗಳನ್ನು ನಿನ್ನೆ ಕತ್ರಿನಾ ಕೈಫ್ ಹಂಚಿಕೊಂಡಿದ್ದರು. ಅದರಲ್ಲಿ ಪತಿ ಮತ್ತು ಅವರ ಕುಟುಂಬದವರಿಗಾಗಿ ಹಲ್ವಾ ಮಾಡಿದ್ದ ಚಿತ್ರವೂ ಇತ್ತು. ‘ನಾನೆ ಮಾಡಿದ ಹಲ್ವಾ’ ಎಂದು ಕತ್ರಿನಾ ಶೀರ್ಷಿಕೆ ನೀಡಿದ್ದರು. ಅದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿದ್ದ ವಿಕ್ಕಿ ಕೌಶಲ್, ನಾನು ಇದುವರೆಗೆ ತಿಂದಿರುವ ಹಲ್ವಾಗಳಲ್ಲೇ ಇದು ಬೆಸ್ಟ್ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT