ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳೊಂದಿಗೆ ನಾನೂ ಸತ್ತಿದ್ದೇನೆ; ಮಗಳ ನೆನಪಿನಲ್ಲಿ ನಟ ವಿಜಯ್‌ ಆ್ಯಂಟನಿ ಪೋಸ್ಟ್‌

Published 23 ಸೆಪ್ಟೆಂಬರ್ 2023, 11:42 IST
Last Updated 23 ಸೆಪ್ಟೆಂಬರ್ 2023, 11:42 IST
ಅಕ್ಷರ ಗಾತ್ರ

ಚೆನ್ನೈ: ಮಗಳ ಸಾವಿನ ನಂತರ ಇದೇ ಮೊದಲ ಬಾರಿಗೆ ತಮಿಳು ನಟ ವಿಜಯ್‌ ಆ್ಯಂಟನಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ‘ಅವಳೊಂದಿಗೆ ನಾನೂ ಸತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್‌ 19ರಂದು ವಿಜಯ್ ಆ್ಯಂಟನಿ ಮಗಳು ಮೀರಾ (16) ತಮ್ಮ ಮನೆಯ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೀರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಥಮ ಪಿಯುಸಿ ಓದುತ್ತಿರುವ ಮೀರಾ ಖಿನ್ನತೆಯಿಂದ ಬಳಲುತ್ತಿದ್ದರು. ಇದೇ ಅವರ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ.

ಮಗಳ ಸಾವಿನಿಂದ ಆಘಾತಗೊಳಕ್ಕಾಗಿದ್ದ ವಿಜಯ್‌ ಆ್ಯಂಟನಿ ಮಗಳ ಕುರಿತು ಭಾವಾನಾತ್ಮಕ ಪೋಸ್ಟ್‌ಅನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ನನ್ನ ಮಗಳು ಮೀರಾ ಧೈರ್ಯವಂತೆ ಹಾಗೂ ಕರುಣಾಮಯಿ. ಅತ್ಯಂತ ಶಾಂತಿಯುತವಾದ ಸ್ಥಳಕ್ಕೆ ನನ್ನ ಮಗಳು ಹೋಗಿದ್ದಾಳೆ. ಅವಳು ಹೋದ ಸ್ಥಳದಲ್ಲಿ ಧರ್ಮ, ಜಾತಿ, ಹಣ, ಹೊಟ್ಟೆಕಿಚ್ಚು, ನೋವು, ಬಡತನ, ಹಗೆ ಇದ್ಯಾವುದು ಇಲ್ಲ. ಅವಳು ನನ್ನ ಜೊತೆ ಮಾತನಾಡುತ್ತಿದ್ದಾಳೆ. ಅವಳೊಂದಿಗೆ ನಾನೂ ಸತ್ತಿದ್ದೇನೆ. ಇದೀಗ ಅವಳ ಜೊತೆ ನಾನು ಸಮಯ ಕಳೆಯುತ್ತಿದ್ದೇನೆ. ನಾನು ಅವಳ ಹೆಸರಿನಲ್ಲಿ ಮಾಡುವ ಎಲ್ಲಾ ಒಳ್ಳೆಯ ಕೆಲಸಗಳನ್ನು ಅವಳು ತಾನಾಗಿಯೇ ಪ್ರಾರಂಭಿಸುತ್ತಾಳೆ’ ಎಂದು ಬರೆದುಕೊಂಡಿದ್ದಾರೆ.

ವಿಜಯ್‌ ಅವರ ಪೋಸ್ಟ್‌ಗೆ ಅವರ ಅಭಿಮಾನಿಗಳು ಕಂಬಿನಿ ಮಿಡಿದಿದ್ದಾರೆ. ನಿಮ್ಮ ಜೊತೆ ಮೀರಾ ಸದಾ ಇರುತ್ತಾಳೆ ಎಂದು ಸಮಾಧಾನದ ಮಾತುಗಳನ್ನು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT