ವಿಜಯ ರಾಘವೇಂದ್ರ ಅಭಿನಯದ ‘ಎಫ್ಐಆರ್ 6 to 6’ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಕೆ.ವಿ.ರಮಣರಾಜ್ ಆ್ಯಕ್ಷನ್ ಕಟ್ ಹೇಳಿದ್ದು, ಭಾಗ್ಯರಮೇಶ್ ನಿರ್ಮಾಣ ಮಾಡಿದ್ದಾರೆ.

‘ಇದೊಂದು ಆ್ಯಕ್ಷನ್, ಥ್ರಿಲ್ಲರ್ ಸಿನಿಮಾ. ಇಡೀ ಚಿತ್ರವನ್ನು ನೈಟ್ ಎಫೆಕ್ಟ್ನಲ್ಲಿಯೇ ಚಿತ್ರೀಕರಣ ಮಾಡಿದ್ದೇವೆ. ಈ ಸಿನಿಮಾಗಾಗಿ ಸಾಕಷ್ಟು ರಾತ್ರಿ ನಿದ್ದೆ ಬಿಟ್ಟು ಕಷ್ಟಪಟ್ಟಿದ್ದೇವೆ. ಕಷ್ಟಪಟ್ಟು, ಇಷ್ಟಪಟ್ಟು ಮಾಡಿದ ಸಿನಿಮಾವಿದು. ಚಿತ್ರ ಬಿಡುಗಡೆಗೆ ಸಿದ್ಧವಿದೆ’ ಎಂದರು ವಿಜಯ್ ರಾಘವೇಂದ್ರ.

ಸತೀಶ್ ಬಾಬು ಹಾಗೂ ಎಂ.ಎಸ್. ತ್ಯಾಗರಾಜ್ ಸಂಗೀತ ಚಿತ್ರಕ್ಕಿದೆ. ಸಿರಿ ರಾಜು, ಸ್ವಾತಿ, ಯಶಾ ಶೆಟ್ಟಿ ಚಿತ್ರದ ನಾಯಕಿಯರು.

‘ಇದು ನನ್ನ ಎರಡನೆಯ ಚಿತ್ರ. ಯುವಕನೊಬ್ಬ ಒಂದು ಘಟನೆಯಲ್ಲಿ ಸಿಕ್ಕಿ ಹಾಕಿಕೊಂಡು ನಂತರ ಆ ಸಂದರ್ಭವನ್ನು ಹೇಗೆ ಎದುರಿಸುತ್ತಾನೆ ಎಂಬುದೇ ಕಥೆ. ಸಂಜೆ ಆರರಿಂದ ಬೆಳಗಿನ ಜಾವ ಆರು ಗಂಟೆವರೆಗೆ ನಡೆಯುವ ಕಥೆಯಿದು’ ಎಂದರು ನಿರ್ದೇಶಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.